amplitude ಆಂಪ್ಲಿಟ್ಯೂಡ್‍
ನಾಮವಾಚಕ
  1. ವೈಶಾಲ್ಯ; ವಿಸ್ತೀರ್ಣ.
  2. ಸಮೃದ್ಧಿ; ಪುಷ್ಕಲತೆ.
  3. ಹರವು; ವ್ಯಾಪಕತೆ; ಮುಖ್ಯವಾಗಿ ಮನಸ್ಸಿನ, ಬುದ್ಧಿಯ ವ್ಯಾಪ್ತಿ.
  4. ಮಹತ್ವ; ಗೌರವ.
  5. (ಖಗೋಳ ವಿಜ್ಞಾನ) ವೈಶಾಲ್ಯ; ಕ್ಷಿತಿಜದ ಪೂರ್ವ ಯಾ ಪಶ್ಚಿಮ ಬಿಂದುವಿಗೂ ಯಾವುದೇ ಖಗೋಳಕಾಯದ ಮೂಲಕ ಹಾದು ಹೋಗುವ ಶೃಂಗೀಯ ವೃತ್ತದ ಪಾದಕ್ಕೂ ಇರುವ ಕೋನದೂರ.
  6. (ಭೌತವಿಜ್ಞಾನ) ವೈಶಾಲ್ಯ; ಕಂಪನದಲ್ಲಿ ಯಾ ಆಂದೋಲನದಲ್ಲಿ ಮಧ್ಯ ಸ್ಥಾನದಿಂದ ಅಂತ್ಯದ ಬಿಂದುವಿಗೆ ಇರುವ ದೂರ.
  7. (ವಿದ್ಯುದ್ವಿಜ್ಞಾನ) ವೈಶಾಲ್ಯ; ವಿಸ್ತಾರ; ಪರ್ಯಾಯ ವಿದ್ಯುತ್‍ ಪ್ರವಾಹದಲ್ಲಿ ಸರಾಸರಿಯಿಂದ ಗರಿಷ್ಠ ವಿಚಲನ.