amphibology ಆಂಫಿಬಾಲಜಿ
ನಾಮವಾಚಕ
  1. (ಭಾಷೆಯ ಯಾ ವಾಕ್ಯದ ವಿಷಯದಲ್ಲಿ) ಹೊರಳುಮಾತು; ಸಂದಿಗ್ಧತೆ; ಸಂಶಯಾರ್ಥತೆ; ಸಂದಿಗ್ಧ ಪ್ರಯೋಗ; ವಾಕ್ಯರಚನೆಯಲ್ಲಿಯ ಯಾವುದೋ ಅನಿಷ್ಕೃಷ್ಟತೆಯಿಂದ ಪದವೊಂದಕ್ಕೆ ಯಾ ವಾಕ್ಯಕ್ಕೆ ಒಂದಕ್ಕಿಂತ ಹೆಚ್ಚಿನ, ಭಿನ್ನಭಿನ್ನವಾದ ಅರ್ಥಗಳು ಹೊಳೆಯುವಂತಿರುವುದು.
  2. ಶ್ಲೇಷೆ; ಅನೇಕಾರ್ಥತೆ; ಉಭಯಾರ್ಥತೆ.