See also 2amount
1amount ಅಮೌಂಟ್‍
ಅಕರ್ಮಕ ಕ್ರಿಯಾಪದ
  1. ಮೊತ್ತವಾಗು; ಒಟ್ಟಾಗು.
  2. (ಪರಿಣಾಮದಲ್ಲೋ ಇಂಗಿತದಲ್ಲೋ) ಹಾಗೆ ಅರ್ಥವಾಗು; ಅಷ್ಟಕ್ಕೆ ಸಮನಾಗು: an act amounting to treason ರಾಷ್ಟ್ರದ್ರೋಹಕ್ಕೆ ಸಮನಾದ ಕೆಲಸ.
See also 1amount
2amount ಅಮೌಂಟ್‍
ನಾಮವಾಚಕ
  1. ಮೊತ್ತ; ಒಟ್ಟು; ಮೊಬಲಗು, ಮುಖ್ಯವಾಗಿ ಅಸಲೂ ಬಡ್ಡಿಯೂ ಕೂಡಿದ ಹಣ.
  2. (ರೂಪಕವಾಗಿ) ಒಟ್ಟು ತಾತ್ಪರ್ಯ; ಫಲಿತ: the amount of his remarks ಅವನ ಮಾತಿನ ಒಟ್ಟಾರೆ ತಾತ್ಪರ್ಯ.
  3. ಒಟ್ಟು ಪರಿಮಾಣ; ಒಟ್ಟೆಣಿಕೆಯ ಮೊತ್ತ: the amount of resistance he faced ಅವನಿಗೆ ಎದರು ಬಂದ ಒಟ್ಟು ವಿರೋಧ.
  4. (ರೂಪಕವಾಗಿ) ಬೆಲೆ; ಪ್ರಾಮುಖ್ಯ.
ಪದಗುಚ್ಛ
  1. any amount ಬಹಳ; ಹೆಚ್ಚು ಪ್ರಮಾಣ.
  2. no amount of ಎಷ್ಟೇ ಇದ್ದರೂ ಆಗದ; ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದ್ದರೂ ಸಾಲದಾಗದ.