amortize ಅಮಾರ್ಟೈ
ಸಕರ್ಮಕ ಕ್ರಿಯಾಪದ
  1. (ಸಾಮೂಹಿಕ ಉಪಯೋಗಕ್ಕೆ) ಪರಭಾರೆ ಮಾಡದಂತೆ ಯಾ ಪರಭಾರೆ ಹಕ್ಕನ್ನು ಕಳೆದು ದತ್ತಿಬಿಡು.
  2. ಕಂತಿನಲ್ಲಿ ಯಾ ಋಣವಿಮೋಚನ ನಿಧಿಯ ಮೂಲಕ ಸಾಲ ತೀರಿಸು.
  3. (ಆಸ್ತಿಯ) ಮೂಲಬೆಲೆಯನ್ನು ಯಾ ಪ್ರಾರಂಭಿಕ ವೆಚ್ಚವನ್ನು ಕ್ರಮೇಣ ಕಳೆ, ತೊಡೆದುಹಾಕು, ವಜಾಮಾಡು.