among(st) ಅಮಂಗ್‍(ಸ್ಟ್‍)
ಉಪಸರ್ಗ
  1. ನಡುವೆ; ಮಧ್ಯೆ: among(st) his unknown enemies ತನಗೆ ಗೊತ್ತಿರದ ಶತ್ರುಗಳ ನಡುವೆ.
  2. ಒಳಗೆ; -ಅಲ್ಲಿ; ಆ ಮಿತಿಯಲ್ಲಿ: five rupees among(st) us ನಮ್ಮಲ್ಲಿ ಐದು ರೂಪಾಯಿಗಳಿವೆ. divided among(st) us ನಮ್ಮೊಳಗೆ ಹಂಚಿಕೆಯಾಯಿತು.
  3. ದೃಷ್ಟಿಯಲ್ಲಿ; ಅಭಿಪ್ರಾಯದಲ್ಲಿ; ಆಚರಣೆಯಲ್ಲಿ: a person respected among(st) thinkers ಆಲೋಚನಾಪರರ ದೃಷ್ಟಿಯಲ್ಲಿ ಗೌರವವುಳ್ಳ ವ್ಯಕ್ತಿ.
  4. ಶ್ರೇಷ್ಠ; ಎಲ್ಲರಿಗಿಂತ ಮಿಗಿಲಾದ: a poet among(st) poets ಕವಿಗಳಲ್ಲಿ ಶ್ರೇಷ್ಠನಾದ ಕವಿ.
  5. ಪೈಕಿ; ವರ್ಗದಲ್ಲಿ; ತಂಡದಲ್ಲಿ ಗುಂಪಿನಲ್ಲಿ: name the best among(st) us ನಮ್ಮ ಗುಂಪಿನಲ್ಲಿ ಉತ್ತಮನನ್ನು ಹೆಸರಿಸು.
  6. ಪರಸ್ಪರ; ತಮ್ಮ ತಮ್ಮೊಳಗೆ: they fought among(st) themselves ಅವರು ತಮ್ಮತಮ್ಮೊಳಗೇ ಕಾದಾಡಿದರು.
  7. ಒಟ್ಟುಗೂಡಿ; ಎಲ್ಲ ಸೇರಿ; ಒಟ್ಟಾಗಿ; ಒಂದಾಗಿ: you killed him among(st) yourselves ನೀವು ಒಟ್ಟುಗೂಡಿ ಅವನನ್ನು ಕೊಂದಿರಿ.
  8. ಹೋಲಿಸಿದಾಗ; ಹೋಲಿಸಿದರೆ: one among(st) many (ವೈಶಿಷ್ಟ್ಯವೇನೂ ಇಲ್ಲದ) ಹಲವರಲ್ಲಿ ಒಬ್ಬ; ಹತ್ತರಲ್ಲಿ ಹನ್ನೊಂದು; ಅನೇಕ ವಸ್ತುಗಳಲ್ಲಿ ಒಂದು.