See also 2amble
1amble ಆಂಬ್‍ಲ್‍
ಅಕರ್ಮಕ ಕ್ರಿಯಾಪದ
  1. (ಕುದುರೆಯ ವಿಷಯದಲ್ಲಿ) ಜಗ್ಗಿ ನಡೆ; ತೊಂಗಿ ಬಳುಕಾಡಿಕೊಂಡು ನಡೆ; ಬಲಗಡೆಯ ಕಾಲೆರಡನ್ನೂ, ತರುವಾಯ ಎಡಗಡೆಯ ಕಾಲೆರಡನ್ನೂ ಒಟ್ಟಿಗೆ ಎತ್ತಿಟ್ಟು ನಡೆ.
  2. ಜಗ್ಗುನಡೆ ಕುದುರೆಯ ಸವಾರಿ ಮಾಡು.
  3. ಜಗ್ಗು ಕುದುರೆಯಂತೆ ಹೆಜ್ಜೆಹಾಕು.
  4. ನಿಧಾನವಾಗಿ–ನಡೆ, ಕಾಲುಹಾಕು.
See also 1amble
2amble ಆಂಬ್‍ಲ್‍
ನಾಮವಾಚಕ
  1. (ಕುದುರೆಯ ವಿಷಯದಲ್ಲಿ) ಜಗ್ಗುನಡೆ; ತೊಂಗುಹೆಜ್ಜೆ.
  2. ನಿಧಾನ ನಡೆ; ಸಾವಕಾಶವಾದ ಹೆಜ್ಜೆ, ಕಾಲು.