ambivalence ಆಂಬಿವೇ(ವ)ಲನ್ಸ್‍
ನಾಮವಾಚಕ
  1. (ಮನಶ್ಶಾಸ್ತ್ರ) ಉಭಯಭಾವ; ಉಭಯಪ್ರವೃತ್ತಿ; ಯಾವುದೇ ವ್ಯಕ್ತಿಯ ಯಾ ವಿಷಯದ ಬಗೆಗೆ ಇರುವ, ದ್ವೇಷ ಮತ್ತು ಪ್ರೀತಿ ಮೊದಲಾದ ಪರಸ್ಪರ ವಿರುದ್ಧ ಮನೋವೃತ್ತಿಗಳು.
  2. (ಮನಸ್ಸು ಮೊದಲಾದವುಗಳ ವಿಷಯದಲ್ಲಿ) ಅನಿಶ್ಚಯತೆ; ಚಾಂಚಲ್ಯ; ಚಂಚಲತೆ; ಅಸ್ಥಿರತೆ; ಡೋಲಾಯಮಾನ ಸ್ಥಿತಿ; ಎರಡು ವಿರುದ್ಧ ವಿಷಯಗಳ ನಡುವೆ ನಿರಂತರ ಓಲಾಡುವುದು, ತೂಗಾಡುವುದು.