ambassador ಆಂಬ್ಯಾಸಡರ್‍
ನಾಮವಾಚಕ
  1. ರಾಯಭಾರಿ; ರಾಜದೂತ; ರಾಷ್ಟ್ರಪ್ರತಿನಿಧಿ; ರಾಷ್ಟ್ರನಿಯೋಗಿ; ಒಬ್ಬ ರಾಜನಿಂದ ಯಾ ಒಂದು ರಾಜ್ಯದಿಂದ ಮತ್ತೊಬ್ಬ ರಾಜನ ಬಳಿಗೆ ಯಾ ರಾಜ್ಯಕ್ಕೆ ಕಳುಹಿಸಲ್ಪಟ್ಟ ನಿಯೋಗಿ; ಒಂದು ದೇಶದ ಯಾ ಒಬ್ಬ ರಾಜನ ಪ್ರತಿನಿಧಿಯಾಗಿ ಪರದೇಶದಲ್ಲಿ ಸ್ಥಾಯಿಯಾಗಿ ನೇಮಕಗೊಂಡಿರುವ ನಿಯೋಗಿ.
  2. ಅಧಿಕೃತ ನಿಯೋಗಿ ಯಾ ದೂತ.
  3. (ಅನಧಿಕೃತ) ಪ್ರತಿನಿಧಿ; ನಿಯೋಗಿ; ದೂತ: an effective ambassador of Indian culture ಭಾರತೀಯ ಸಂಸ್ಕೃತಿಯ ಸಮರ್ಥ ಪ್ರತಿನಿಧಿ. an ambassador of goodwill ಸದ್ಭಾವನೆಯ ನಿಯೋಗಿ.
ಪದಗುಚ್ಛ
  1. Ambassador Extraordinary ವಿಶೇಷ ರಾಯಭಾರಿ; ನಿರ್ದಿಷ್ಟ ಕಾರ್ಯವೊಂದಕ್ಕಾಗಿ ಕಳುಹಿಸಲ್ಪಟ್ಟ ರಾಜ ಪ್ರತಿನಿಧಿ.
  2. Ambassador Plenipotentiary ಪೂರ್ಣಾಧಿಕಾರದ ರಾಯಭಾರಿ; ಕೌಲು, ತನ್ನ ರಾಜನ ಯಾ ರಾಜ್ಯದ ಪರವಾಗಿ ಕರಾರು, ಸಂಧಿಪತ್ರಗಳಿಗೆ ಸಹಿ ಮಾಡುವ ಅಧಿಕಾರವುಳ್ಳ ರಾಯಭಾರಿ.