altitude ಆಲ್ಟಿಟ್ಯೂಡ್‍
ನಾಮವಾಚಕ
  1. ಎತ್ತರ; ಉನ್ನತಿ; ಔನ್ನತ್ಯ; ತುಂಗತ್ವ; ಒಂದು ನಿರ್ದಿಷ್ಟ ಮಟ್ಟದಿಂದ, ಮುಖ್ಯವಾಗಿ ಭೂಮಟ್ಟದಿಂದ ಯಾ ಸಮುದ್ರಮಟ್ಟದಿಂದ, ಅಳೆಯುವ ಎತ್ತರ ಯಾ ಆಳ.
  2. (ಖಗೋಳ ವಿಜ್ಞಾನ) ಉನ್ನತಿ; ಉಚ್ಛ್ರಾಯ; ಕೋನೋನ್ನತಿ; ಆಕಾಶಕಾಯವನ್ನೂ ವೀಕ್ಷಕನನ್ನೂ ಸೇರಿಸುವ ರೇಖೆಯು ಭೂಮಿಯ ಸಮತಲದೊಂದಿಗೆ ಉಂಟುಮಾಡುವ ಕೋನ.
  3. (ಜ್ಯಾಮಿತಿ) ಲಂಬೋನ್ನತಿ; ಯಾವುದೇ ಜ್ಯಾಮಿತೀಯ ಆಕೃತಿಯ ಪಾದದಿಂದ ಶೀರ್ಷದವರೆಗಿನ ಲಂಬದ ಅಳತೆ.
  4. (ಹೆಚ್ಚಾಗಿ ಬಹುವಚನ) ಎತ್ತರಗಳು; ಎತ್ತರದ ಜಾಗಗಳು.
  5. (ರೂಪಕವಾಗಿ) ಹಿರಿಮೆ; ಔನ್ನತ್ಯ; ಶ್ರೇಷ್ಠತೆ; ಉಚ್ಛ್ರಾಯ (ಸ್ಥಿತಿ).