See also 2along
1along ಅಲಾಂಗ್‍
ಕ್ರಿಯಾವಿಶೇಷಣ
  1. ಉದ್ದಕ್ಕೂ: go along the river ಹೊಳೆಯ ಉದ್ದಕ್ಕೂ ಹೋಗು.
  2. ಮುಂದುಮುಂದಕ್ಕೆ: you will see the hill if you go along ನೀವು ಮುಂದುಮುಂದಕ್ಕೆ ಹೋದಂತೆ ಗುಡ್ಡ ನಿಮ್ಮ ಕಣ್ಣಿಗೆ ಬೀಳುತ್ತದೆ.
  3. ಮುಂದುವರಿಯುತ್ತ; ಮುಂದಕ್ಕೆ ಬರುತ್ತ; ಪ್ರಗತಿ ಪಡೆಯುತ್ತ: coming along nicely ಚೆನ್ನಾಗಿ ಮುಂದಕ್ಕೆ ಬರುತ್ತಿದೆ.
  4. ಒಡನೆ; ಜೊತೆಗೆ: he brought his wife along ಅವನು ತನ್ನ ಜೊತೆಗೆ ಹೆಂಡತಿಯನ್ನೂ ಕರೆತಂದನು. take torch along ಪಂಜನ್ನು ಜೊತೆಗೊಯ್ಯಿ.
ನುಡಿಗಟ್ಟು
  1. all along ಉದ್ದಕ್ಕೂ; ಅಷ್ಟು ಹೊತ್ತೂ; ಅನುಗಾಲವೂ.
  2. along with ಜೊತೆಯಲ್ಲಿ.
  3. get along ಮುಂದೆ ಹೋಗು; ಮುಂದೆ–ಸಾಗು, ನಡೆ.
See also 1along
2along ಅಲಾಂಗ್‍
ಉಪಸರ್ಗ
  1. ಉದ್ದಕ್ಕೂ: a river flows along its course ತನ್ನ ಪಾತ್ರದುದ್ದಕ್ಕೂ ಹೊಳೆ ಹರಿಯುತ್ತದೆ.
  2. ಅನುಗುಣವಾಗಿ; ಅನುಸಾರವಾಗಿ: conducted research along specific lines ನಿರ್ದಿಷ್ಟ ಮಾರ್ಗಗಳಿಗೆ ಅನುಸಾರವಾಗಿ ಸಂಶೋಧನೆ ನಡೆಸಿದರು.
  3. ಮಧ್ಯೆ; ನಡುವೆ; ಆಗ; ಮಧ್ಯದಲ್ಲಿ: somewhere along the journey ಪ್ರಯಾಣದ ನಡುವೆ ಎಲ್ಲಿಯೋ.