See also 2allowance
1allowance ಅಲೌಅನ್ಸ್‍
ನಾಮವಾಚಕ
  1. ಅನುಮತಿ; ಒಪ್ಪಿಗೆ; ಮನ್ನಣೆ; ಸಮ್ಮತಿ.
  2. ತಾಳುವಿಕೆ; ಸಹಿಸುವಿಕೆ; ಅನುಮೋದನೆ: the allowance of slavery ದಾಸ್ಯಪದ್ಧತಿಯ ಅನುಮೋದನೆ.
  3. (ಭೌತವಿಜ್ಞಾನ, ರಸಾಯನವಿಜ್ಞಾನ, ಇತ್ಯಾದಿ) ಅವಕಾಶ; ವಿನಾಯಿತಿ; (ಅಳತೆ, ತೂಕ, ಮೊದಲಾದವುಗಳ) ಪ್ರಮಾಣದಲ್ಲಿ ವಿನಾಯಿತಿ ನೀಡಬಹುದಾದ ಮಿತಿ.
  4. (ಮುಖ್ಯವಾಗಿ ಆಹಾರ ಯಾ ಹಣದ) ನಿಗದಿಯಾದ–ಪಾಲು, ಮೊತ್ತ, ಭತ್ಯ.
  5. ಸೋಡಿ; ರಿಯಾಯಿತಿ; ಉತ್ತಾರ; ವಟ್ಟ.
ನುಡಿಗಟ್ಟು

make allowance for

  1. (ಅಲ್ಪವಾದ ದೋಷ, ದೌರ್ಬಲ್ಯ, ಮೊದಲಾದವುಗಳ ವಿಷಯದಲ್ಲಿ) ಲಘುವಾಗಿ–ಕಾಣು, ಕ್ಷಮಿಸು.
  2. ಪರಿಗಣನೆಗೆ ತೆಗೆದುಕೊ.
See also 1allowance
2allowance ಅಲೌಅನ್ಸ್‍
ಸಕರ್ಮಕ ಕ್ರಿಯಾಪದ
  1. ಪಡಿ, ಭತ್ಯ, ಮೊದಲಾದವನ್ನು ಕೊಡು.
  2. ಮಿತ ಪರಿಮಾಣದಲ್ಲಿ ಕೊಡು.