See also 2alive
1alive ಅಲೈವ್‍
ಕ್ರಿಯಾವಿಶೇಷಣ
  1. ಬದುಕಿ; ಜೀವಂತವಾಗಿ; ಸಜೀವವಾಗಿ.
  2. (ಭಾವನೆ ಮೊದಲಾದವುಗಳಿಗೆ) ಎಚ್ಚೆತ್ತು; ಜಾಗ್ರತವಾಗಿ; ಪ್ರತಿಸ್ಪಂದಿಯಾಗಿ; ಸಂವೇದಿಯಾಗಿ.
  3. ಚುರುಕಾಗಿ; ಗೆಲವಿನಿಂದ; ಹುಮ್ಮಸ್ಸಿನಿಂದ; ಚಟುವಟಿಕೆಯಿಂದ; ಲವಲವಿಕೆಯಿಂದ; ಜೀವಕಳೆ ಹೊಂದಿ.
  4. ಇಡಿಕಿರಿದು; ತುಂಬಿ: the river was alive with boats ನದಿ ದೋಣಿಗಳಿಂದ ಇಡಿಕಿರಿದಿತ್ತು.
ನುಡಿಗಟ್ಟು

be alive to (ಯಾವುದೇ ವಿಷಯದ, ಪರಿಸ್ಥಿತಿಯ) ಮಹತ್ತ್ವವನ್ನು ಗ್ರಹಿಸಿ ಯಾ ಅರಿತು: alive to the risks involved ಇರುವ ಅಪಾಯಗಳನ್ನರಿತು.

See also 1alive
2alive ಅಲೈವ್‍
ಆಖ್ಯಾತಕ ಗುಣವಾಚಕ
  1. ಬದುಕಿರುವ; ಜೀವಂತವಾಗಿರುವ.
  2. ಎಚ್ಚೆತ್ತ; ಜಾಗೃತ.
  3. ಚುರುಕಿನ; ಗೆಲವಿನ; ಹುಮ್ಮಸ್ಸಿನ; ಜೀವಕಳೆಯಿಂದ ತುಂಬಿದ; ಲವಲವಿಕೆಯಿಂದ ಕೂಡಿದ.
ಪದಗುಚ್ಛ
  1. alive and kicking ಚಟುವಟಿಕೆಯಿಂದ ಕೂಡಿ.
  2. any man alive (ಆಡುಮಾತು) (ಬದುಕಿರುವ ಯಾ ಪ್ರಪಂಚದಲ್ಲಿ) ಯಾರಾದರೂ ಸರಿಯೆ.
  3. man alive! (ಆಡುಮಾತು) ಎಲಾ ಮನುಷ್ಯ! ಎಲಾ ಇವನ!
ನುಡಿಗಟ್ಟು
  1. keep the matter alive ವಿಷಯವನ್ನು ಜೀವಂತವಾಗಿಡು; ಇನ್ನೂ ಚರ್ಚೆಯ ಸ್ಥಿತಿಯಲ್ಲೇ ಇಟ್ಟಿರು.
  2. look alive (ಆಡುಮಾತು) ಚುರುಕಾಗಿರು; ಸುಟಿಯಾಗಿರು; ಬೇಗ ಮಾಡು.
  3. microphone is alive ಮೈಕ್ರೊಹೋನ್‍ ನಡೆಯುತ್ತಿದೆ (ಮೈಕ್ರೊಹೋನ್‍ ಸ್ವಿಚ್ಚು ಹಾಕಿದೆ ಮತ್ತು ಕೆಲಸ ಮಾಡುತ್ತಿದೆ).
  4. wire is alive ತಂತಿಯಲ್ಲಿ ವಿದ್ಯುತ್ತು ಹರಿಯುತ್ತಿದೆ.