align ಅಲೈನ್‍
ಸಕರ್ಮಕ ಕ್ರಿಯಾಪದ
  1. ಸಾಲಾಗಿಸು; ಸಾಲುಗೂಡಿಸು; ಸಾಲಿಗೆ ತರು.
  2. ಸರಿಯಾಗಿ ಜೋಡಿಸು; ಸರಿಹೊಂದಿಸು.
  3. ಸಮರೇಖೆಗೊಳಿಸು; ಮುಖ್ಯವಾಗಿ ಮೂರು ಯಾ ಹೆಚ್ಚು ಬಿಂದುಗಳನ್ನು ಒಂದೇ ಸಮರೇಖೆಗೆ ತರು.
  4. ಜತೆಗೂಡಿಸು; ಒಟ್ಟುಗೂಡಿಸು; ಬೇರೆಯವರೊಂದಿಗೆ ಒಮ್ಮತದಿಂದಿರುವಂತೆ ಯಾ ಒಟ್ಟಾಗಿರುವಂತೆ ಮಾಡು: align nations against war ಯುದ್ಧ ವಿರುದ್ಧವಾಗಿ ರಾಷ್ಟ್ರಗಳನ್ನು ಒಟ್ಟುಗೂಡಿಸು.
ಅಕರ್ಮಕ ಕ್ರಿಯಾಪದ
  1. ಸಾಲಾಗಿ; ಪಂಕ್ತಿಯಾಗು; ಸಾಲುಗೂಡು; ಸಾಲು ಹಿಡಿ; ಹಂತಿ ಹಿಡಿ.
  2. ಸರಿಗೂಡು; ಸರಿಹೊಂದಿಕೊ: wheels should align with the frame ಚಕ್ರಗಳು ಚೌಕಟ್ಟಿಗೆ ಸರಿಹೊಂದಬೇಕು.