See also 2alarm
1alarm ಅಲಾರ್ಮ್‍
ನಾಮವಾಚಕ
  1. ಕಾಳಗದ ಕರೆ; ಕರೆಗೊಂಬು; ಸನ್ನಾಹಭೇರಿ; ರಣಭೇರಿ.
  2. ಅಪಾಯ ಸೂಚಕ ಧ್ವನಿ.
  3. ಅಪಾಯಸೂಚನೆ; ಅಪಾಯದ ಎಚ್ಚರಿಕೆ: give the alarm ಅಪಾಯದ ಸೂಚನೆ ಕೊಡು.
  4. ದಿಗಿಲು; ಅಪಾಯದ ಭೀತಿ; ಗಾಬರಿ.
  5. (ಕತ್ತಿವರಸೆ)ಕಾಲು ಮುಂದಕ್ಕೆತ್ತಿ ನೆಲಕ್ಕೆ ಅಪ್ಪಳಿಸುವುದು.
  6. ಎಚ್ಚರಕ; ಅಲಾರಮ್‍:
    1. ಅಪಾಯವನ್ನು ಸೂಚಿಸುವ ಯಂತ್ರ ವ್ಯವಸ್ಥೆ.
    2. ನಿಗದಿಯಾದ ಕಾಲಕ್ಕೆ ಗಂಟೆ ಬಾರಿಸುವ ಯಂತ್ರ.
See also 1alarm
2alarm ಅಲಾರ್ಮ್‍
ಸಕರ್ಮಕ ಕ್ರಿಯಾಪದ
  1. ಎಚ್ಚರಿಸು; ಅಪಾಯಸೂಚಿಸು.
  2. ಗಾಬರಿಗೊಳಿಸು; ಭಯಪಡಿಸು; ದಿಗಿಲು ಬೀಳಿಸು; ಭೀತಿಯುಂಟು ಮಾಡು.