airlock ಏರ್‍ಲಾಕ್‍
ನಾಮವಾಚಕ
  1. (ತಂತ್ರ ವಿಜ್ಞಾನ) ಗಾಳಿತಡೆ; ವಾಯುಬಂಧ; ಪಂಪು ಮೊದಲಾದವುಗಳಲ್ಲಿ ಗಾಳಿ ಸೇರಿಕೊಳ್ಳುವುದರಿಂದ ಉಂಟಾಗಿರುವ ತಡೆ.
  2. ವಾಯುಸ್ತಂಭಕ–ಕೋಣೆ, ವಿಭಾಗ; ವಾಯುವನ್ನು ಒತ್ತಡದಲ್ಲಿ ಹಿಡಿದಿಟ್ಟಿರುವ ನೌಕೆಯ ಒಳಭಾಗದಿಂದ ಯಾ ಅಂಥ ಇತರ ಪ್ರದೇಶಗಳಿಂದ ಹೊರಕ್ಕೆ ಬರಲು ಯಾ ಅವುಗಳ ಒಳಕ್ಕೆ ಹೋಗಲು ಹಾಯಬೇಕಾಗಿರುವ ಗಾಳಿ ತೂರದ ಕೋಣೆ, ವಿಭಾಗ.