See also 2aim
1aim ಏಮ್‍
ಸಕರ್ಮಕ ಕ್ರಿಯಾಪದ
  1. ಗುರಿಯಿಡು; ಗುರಿಯತ್ತ ತಿರುಗಿಸು: aimed the gun at the tiger ಆತ ಬಂದೂಕವನ್ನು ಹುಲಿಗೆ ಗುರಿಯಿಟ್ಟ.
  2. ಉದ್ದೇಶಿಸು: a study aimed at clarifying the issue ವಿಷಯದ ಸ್ಪಷ್ಟೀಕರಣಕ್ಕಾಗಿ ಉದ್ದೇಶಿಸಲಾದ ಅಧ್ಯಯನ.
ಅಕರ್ಮಕ ಕ್ರಿಯಾಪದ
  1. ಗುರಿಯಿಡು; ಗುರಿ ಹಿಡಿ.
  2. ಉದ್ದೇಶಿಸು ಯಾ ಪ್ರಯತ್ನಿಸು: aims at objective knowledge ವಿಜ್ಞಾನವು ವಸ್ತುನಿಷ್ಠ ಜ್ಞಾನವನ್ನು ಉದ್ದೇಶಿಸುತ್ತದೆ.
ಪದಗುಚ್ಛ
  1. aim at
    1. (ಬಂದೂಕು ಮೊದಲಾದವನ್ನು) ಒಂದರ ಕಡೆಗೆ ತಿರುಗಿಸು, ತೋರಿಸು.
    2. (ರೂಪಕವಾಗಿ) ಪಡೆಯಲು ಪ್ರಯತ್ನಿಸು: aim at a professorship ಪ್ರಾಧ್ಯಾಪಕ ಹುದ್ದೆಯನ್ನು ಗುರಿಯಲ್ಲಿಡು; ಪ್ರಾಧ್ಯಾಪಕ ಹುದ್ದೆ ಗಳಿಸಲು ಪ್ರಯತ್ನಿಸು.
  2. aim high ಮಹತ್ತ್ವಾಕಾಂಕ್ಷೆ ಹೊಂದಿರು; ದೊಡ್ಡದಕ್ಕೆ ಗುರಿಯಿಡು.
See also 1aim
2aim ಏಮ್‍
ನಾಮವಾಚಕ
  1. ಗುರಿಯಿಡುವುದು; ಗುರಿ ಇಡುವಿಕೆ; ಈಡಿಡುವಿಕೆ.
  2. ಗುರಿ; ಈಡು; ಲಕ್ಷ್ಯ.
  3. ಉದ್ದೇಶ.