See also 2aid
1aid ಏಡ್‍
ನಾಮವಾಚಕ
  1. ನೆರವು; ಒತ್ತಾಸೆ; ಸಹಾಯ.
  2. (ನ್ಯಾಯಶಾಸ್ತ್ರ) ಜಂಟಿದಾರನ ಸಹಾಯ; ಪ್ರತಿವಾದಿಯು ತನ್ನ ಜಂಟಿದಾರನಿಂದ ಹಕ್ಕಾಗಿ ಪಡೆಯಬಹುದಾದ ಸಹಾಯ.
  3. (ಇಂಗ್ಲಿಷ್‍ ಚರಿತ್ರೆ) ರಾಜಸಹಾಯಧನ; ವಿಶೇಷ ಉದ್ದೇಶಕ್ಕಾಗಿ ಪಾರ್ಲಿಮೆಂಟು ದೊರೆಗೆ ಕೊಡುತ್ತಿದ್ದ ಸಹಾಯಧನ ಯಾ ನೆರವು.
  4. (ಇಂಗ್ಲಿಷ್‍ ಚರಿತ್ರೆ) (ಆರ್ಥಿಕ ಇಲಾಖೆಯು ದೊರೆಗೆ ಕೊಡುವ) ಸರ್ಕಾರಿ ಸಾಲ.
  5. ನೆರವಿಗ; ಬೆಂಬಲಿಗ; ಸಹಾಯಕ.
  6. ಸಹಾಯಕ–ವಸ್ತು, ಸಾಧನ, ಉಪಕರಣ: hearing aid ಕಿವಿ ನೆರವು; ಶ್ರವಣಸಾಧನ; ಉಪಕರ್ಣ; ಕಿವುಡನು ಕೇಳುವಂತೆ ಸಹಾಯ ಮಾಡುವ ಸಲಕರಣೆ.
ಪದಗುಚ್ಛ
  1. aids and appliances ಸಹಾಯಕ ಸಾಮಗ್ರಿ; ಸಹಾಯ ಸಂಪತ್ತು ಮತ್ತು ಸಾಧನಗಳು.
  2. in aid of ನೆರವಿಗಾಗಿ; ಸಹಾಯಾರ್ಥ.
ನುಡಿಗಟ್ಟು

what’s (all) this in aid of? (ಆಡುಮಾತು) ಇದರ ಉದ್ದೇಶವೇನು?

See also 1aid
2aid ಏಡ್‍
ಸಕರ್ಮಕ ಕ್ರಿಯಾಪದ

(ಒಬ್ಬ ವ್ಯಕ್ತಿಗೆ, ಯಾವುದನ್ನೇ ಮಾಡುವುದು, ಪಡೆಯುವುದು, ಮೊದಲಾದವಕ್ಕೆ) ನೆರವು ಕೊಡು; ಸಹಾಯ ಮಾಡು; ಒತ್ತಾಸೆ ಕೊಡು; ಬೆಂಬಲ ಕೊಡು.

ಅಕರ್ಮಕ ಕ್ರಿಯಾಪದ

ನೆರವಾಗು; ಸಹಾಯವಾಗು; ಒತ್ತಾಸೆಯಾಗು; ಬೆಂಬಲಿಸು: he aided in my attempt ಆತ ನನ್ನ ಪ್ರಯತ್ನಕ್ಕೆ ನೆರವಾದನು.

AID
ಸಂಕ್ಷಿಪ್ತ
  1. (ಅಮೆರಿಕನ್‍ ಪ್ರಯೋಗ) Agency for International Development.
  2. artificial insemination by donor.