See also 2ahead
1ahead ಅಹೆಡ್‍
ಕ್ರಿಯಾವಿಶೇಷಣ
  1. (ಕಾಲ ಯಾ ಪ್ರದೇಶದ ವಿಷಯದಲ್ಲಿ) ಮುಂದಾಗಿ; ಮುಂದೆ; ಎಲ್ಲಕ್ಕಿಂತಲೂ ಯಾ ಎಲ್ಲರಿಗಿಂತಲೂ ಮುಂದೆ: look ahead ಮುಂದೆ ನೋಡು.
  2. ನೆಟ್ಟೆದುರಿಗೆ; ಕಟ್ಟೆದುರಿಗೆ; ಹೋಗುತ್ತಿರುವ ದಿಕ್ಕಿನಲ್ಲಿ: there is a chasm ahead ಕಟ್ಟೆದುರಿಗೆ ಒಂದು ಕಮರಿಯಿದೆ.
  3. ತ್ವರೆಯಿಂದ; ಲೆಕ್ಕಿಸದೆ ಮುಂದಕ್ಕೆ.
  4. ಮೊದಲೇ; ಮುಂಚೆಯೇ: plan ahead ಮುಂಚೆಯೇ ಯೋಜಿಸು.
  5. ಮೇಲೇರಿ; ಮುಂದುವರಿದು (ರೂಪಕವಾಗಿ ಸಹ): he is sure to get ahead ಅವನು ಮುಂದುವರಿಯುವುದು ಖಂಡಿತ.
ಪದಗುಚ್ಛ

ahead of

  1. (ಇನ್ನೊಂದಕ್ಕಿಂತ) ಮುಂದೆ ಇರುವ ಯಾ ಹೋಗಿರುವ (ರೂಪಕವಾಗಿ ಸಹ): infantry ahead of cavalry ರಾವುತರಿಗಿಂತ ಮುಂದೆ ಪದಾತಿ.
  2. ಮೀರಿದ; ಮೀರಿಸಿದ: demand ahead of production ಉತ್ಪಾದನೆಯನ್ನು ಮೀರಿದ ಬೇಡಿಕೆ.
ನುಡಿಗಟ್ಟು

go ahead

  1. ಮುಂದುವರಿ; ಮುಂದುವರಿಸು: things are going ahead ಕೆಲಸಗಳು ಮುಂದುವರಿಯುತ್ತಿವೆ.
  2. (ಆಡುಮಾತು) ಹೇಳಬೇಕೆಂದಿರುವುನ್ನು ಹೇಳು, ಮುಂದುವರಿಸು.
  3. (ರೂಪಕವಾಗಿ) ಲೆಕ್ಕಿಸದೆ ಮುನ್ನುಗ್ಗು; ನಿರ್ಲಕ್ಷ್ಯದಿಂದ ಮುಂದುವರಿ.
See also 1ahead
2ahead ಅಹೆಡ್‍
ಗುಣವಾಚಕ

ಮುಂದಿರುವ; ನೇರಕ್ಕಿರುವ; ಕಟ್ಟೆದುರಿಗಿನ: he was unaware of the chasm ahead ಕತ್ತೆದುರಿಗಿರುವ ಕಮರಿ ಆತನಿಗೆ ಗೊತ್ತಿರಲಿಲ್ಲ.