agreement ಅಗ್ರೀಮಂಟ್‍
ನಾಮವಾಚಕ
  1. ಒಮ್ಮನ; ಪರಸ್ಪರ ಸಮ್ಮತಿ; ಒಪ್ಪಿಗೆ.
  2. (ರಾಜಕೀಯ ಮೊದಲಾದ) ಕೌಲು; ಒಡಂಬಡಿಕೆ; ಕರಾರು; ಒಪ್ಪಂದ: the Paris agreement ಪ್ಯಾರಿಸ್‍–ಕೌಲು, ಕರಾರು.
  3. (ನ್ಯಾಯಶಾಸ್ತ್ರ) (ಎರಡು ಯಾ ಹೆಚ್ಚು ಪಕ್ಷಗಳು ಕಾನೂನುಬದ್ಧವಾಗಿ ಮಾಡಿಕೊಂಡ ಯಾವುದೇ ಬಗೆಯ) ಕರಾರು; ಒಪ್ಪಂದ; ಒಡಂಬಡಿಕೆ.
  4. ಒಮ್ಮತ; ಏಕಾಭಿಪ್ರಾಯ.
  5. ಸಾಮರಸ್ಯ; ಪರಸ್ಪರ–ಹೊಂದಿಕೊಳ್ಳುವಿಕೆ, ಹೊಂದಿಕೊಂಡಿರುವಿಕೆ.
  6. (ವ್ಯಾಕರಣ) ಅನ್ವಯ; ಹೊಂದಿಕೆ; (ಕರ್ತೃ-ಕ್ರಿಯಾ, ವಿಶೇಷಣ-ವಿಶೇಷ್ಯ, ಸಂಬಂಧಸೂಚಕ ಸರ್ವನಾಮ-ಪೂರ್ವನಾಮ, ಮೊದಲಾದವು ವಚನ, ಪುರುಷ, ಲಿಂಗ, ವಿಭಕ್ತಿ, ಮೊದಲಾದವುಗಳಲ್ಲಿ) ಹೊಂದಿಕೊಂಡಿರುವಿಕೆ; ಸಮಾನವಾಗಿರುವಿಕೆ.