agree ಅಗ್ರೀ
ಸಕರ್ಮಕ ಕ್ರಿಯಾಪದ
  1. (ಲೆಕ್ಕಾಚಾರ, ಜಮಾ ಖರ್ಚು, ಶಿಲ್ಕು, ಮೊದಲಾದವುಗಳನ್ನು) ಸರಿಹೊಂದಿಸು; ತಾಳೆ ಹೊಂದಿಸು: agree accounts ಲೆಕ್ಕ ತಾಳೆ–ಹೊಂದಿಸು, ಮಾಡು.
  2. (ಬ್ರಿಟಿಷ್‍ ಪ್ರಯೋಗ) (ಬೆಲೆ ಮೊದಲಾದವುಗಳ ವಿಷಯದಲ್ಲಿ ಪರಸ್ಪರ) ಒಪ್ಪಿಕೊ; ಒಪ್ಪಿಗೆಗೆ ಬರು; ಸಮ್ಮತಿಸು; ಒಡಂಬಡು: the buyer and the seller of the house finally agreed a price ಮನೆಯನ್ನು ಮಾರುವವನು ಮತ್ತು ಕೊಳ್ಳುವವನು ಕಡೆಗೆ ಒಂದು ಬೆಲೆಗೆ ಒಪ್ಪಿಕೊಂಡರು.
  3. (ಸಲಹೆ, ಷರತ್ತುಗಳು, ಮೊದಲಾದವುಗಳಿಗೆ) ಒಪ್ಪಿಗೆ ಕೊಡು; ಒಪ್ಪಿಕೊ; ಒಡಂಬಡು; ಸಮ್ಮತಿಸು; ಅಂಗೀಕರಿಸು.
ಅಕರ್ಮಕ ಕ್ರಿಯಾಪದ
  1. (ಸಲಹೆ, ಹೇಳಿಕೆ, ಮೊದಲಾದವುಗಳಿಗೆ, ಯಾ ಯಾವುದನ್ನೇ ಮಾಡಲು) ಒಪ್ಪು; ಸಮ್ಮತಿಸು; ಅಂಗೀಕಾರ ಕೊಡು; ಒಡಂಬಡು.
  2. ಏಕಾಭಿಪ್ರಾಯ ಹೊಂದಿರು; ಬೇರೊಬ್ಬನ ಅಭಿಪ್ರಾಯವನ್ನೇ (ನೀನೂ) ಹೊಂದಿರು, ಪಡೆದಿರು.
  3. (ಬೇರೊಬ್ಬನೊಡನೆ) ಒಮ್ಮತದಿಂದಿರು; ಹೊಂದಿಕೊಂಡು ಹೋಗು; ಸಾಮರಸ್ಯದಿಂದಿರು; ಒಮ್ಮನದಿಂದಿರು.
  4. ತಾಳೆಯಾಗು; ತಾಳೆಬೀಳು; ಸರಿಬೀಳು; ಸರಿಹೊಂದು: the two accounts of the incident do not agree ಘಟನೆಯ ಈ ಎರಡು ವರದಿಗಳು ತಾಳೆಯಾಗುವುದಿಲ್ಲ.
  5. (ವ್ಯಾಕರಣ) (ಕರ್ತೃಪದ-ಕ್ರಿಯಾಪದ, ವಿಶೇಷಣ-ವಿಶೇಷ್ಯ, ಸಂಬಂಧಸೂಚಕ ಸರ್ವನಾಮ-ಪೂರ್ವನಾಮ, ಮೊದಲಾದವು ವಚನ, ಪುರುಷ, ಲಿಂಗ, ವಿಭಕ್ತಿ, ಮೊದಲಾದ ಅಂಶಗಳಲ್ಲಿ) ಒಂದೇ ಆಗಿರು; ಸಮಾನವಾಗಿರು; ಅನ್ವಯವಾಗಿರು: the verb agrees with its subject in number and person ಕ್ರಿಯಾಪದವು ಕರ್ತೃಪದದೊಡನೆ ಪುರುಷ ವಚನಗಳಲ್ಲಿ ಒಂದೇ ಆಗಿರುತ್ತದೆ.
ಪದಗುಚ್ಛ
  1. agree on ಪರಸ್ಪರ ಒಪ್ಪಿಗೆ ಯಾ ಸಮ್ಮತಿಯಿಂದ–ನಿಶ್ಚಯಿಸು, ನಿರ್ಣಯಿಸು, ನಿರ್ಧರಿಸು.
  2. agree to differ or disagree (ಪರಸ್ಪರ ಮನವೊಲಿಸುವ ಪ್ರಯತ್ನವನ್ನು ಕೈಬಿಟ್ಟು) ಅಭಿಪ್ರಾಯಭೇದವನ್ನು (ಸೌಹಾರ್ದದಿಂದ) ಒಪ್ಪಿಕೊ.
  3. agree together (ಬಹುವಚನದಲ್ಲಿ) (ಎರಡು ಯಾ ಹೆಚ್ಚು ಜನ ಯಾ ವಸ್ತುಗಳು) ಪರಸ್ಪರ ಹೊಂದಿಕೊ; ಒಪ್ಪಿಗೆಯಾಗು: they all agreed together about the matter ಆ ವಿಷಯಕ್ಕೆ ಅವರೆಲ್ಲ ಒಟ್ಟಿಗೆ ಒಪ್ಪಿಕೊಂಡರು.
  4. be agreed ಸದೃಶ ಅಭಿಪ್ರಾಯಕ್ಕೆ ಬರು; ಒಮ್ಮತ ತಲುಪು.
ನುಡಿಗಟ್ಟು

agree with (ವ್ಯಕ್ತಿಗೆ ಯಾ ಶರೀರಕ್ಕೆ ಯಾವುದೇ ಆಹಾರ, ಹವಾ, ವಾಯುಗುಣ, ಕೆಲಸ, ಮೊದಲಾದವು) ಒಗ್ಗು; ಹೊಂದಿಕೊ; ಹಿಡಿಸು; ಹಿತವಾಗು: this climate does not agree with him ಈ ವಾಯುಗುಣ ಅವನಿಗೆ, ಅವನ ದೇಹಕ್ಕೆ ಒಗ್ಗುವುದಿಲ್ಲ.