See also 2agrarian
1agrarian ಅಗ್ರೇರಿಅನ್‍
ಗುಣವಾಚಕ
  1. ಭೂಸಂಬಂಧಿಸಿದ; ಭೂಸ್ವಾಮ್ಯದ; ಜಮೀನಿನೊಡೆತನದ; ಹಿಡುವಳಿಗೆ ಸಂಬಂಧಿಸಿದ: agrarian laws ಭೂಸಂಬಂಧಿ ಕಾನೂನುಗಳು.
  2. (ಜಮೀನಿನ) ಸಾಗುವಳಿಗೆ, ಆರಂಭಕ್ಕೆ, ಬೇಸಾಯಕ್ಕೆ–ಸಂಬಂಧಿಸಿದ; ಕೃಷಿಭೂಮಿಗೆ, ಜಮೀನಿಗೆ ಸಂಬಂಧಿಸಿದ.
  3. ರೈತಾಪಿಯ; ಜಿರಾಯ್ತಿಯ; ಒಕ್ಕಲಿನ; ರೈತನ, ಕೃಷಿಕನ; ರೈತನ ಜೀವನಕ್ಕೆ ಸಂಬಂಧಿಸಿದ.
ಪದಗುಚ್ಛ

agrarian outrage ಭೂಸಂಬಂಧಿ–ಅತ್ಯಾಚಾರ, ದೌರ್ಜನ್ಯ; ಭೂಮಾಲೀಕರು ಮತ್ತು ಗೇಣಿದಾರರ ನಡುವಣ ವ್ಯಾಜ್ಯದ ಪರಿಣಾಮವಾಗಿ ಆಗುವ ದೌರ್ಜನ್ಯ, ಹಿಂಸಾಕೃತ್ಯ.

See also 1agrarian
2agrarian ಅಗ್ರೇರಿಅನ್‍
ನಾಮವಾಚಕ

ಭೂಸುಧಾರಣಾವಾದಿ; ಭೂಮಿಯನ್ನು ಯಾ ಭೂಸಂಪತ್ತನ್ನು ಸಮಭಾಗವಾಗಿ ಪುನರ್ವಿತರಣೆ ಮಾಡಬೇಕೆಂಬ ಸಿದ್ಧಾಂತದ ಪ್ರತಿಪಾದಕ.