agony ಆಗನಿ
ನಾಮವಾಚಕ
  1. (ಮಾನಸಿಕ ಯಾ ದೈಹಿಕ) ಕಡುದುಃಖ; ಅತಿ ಸಂಕಟ; ತೀವ್ರಯಾತನೆ; ದಾರುಣ ವೇದನೆ; ಕಡು ಬೇಗುದಿ; ಕಟ್ಟುಮ್ಮಳ.
  2. ಪ್ರಾಣಸಂಕಟ; ಮರಣ ಯಾತನೆ; ಸಾವಿಗೆ ಮುಂಚಿನ ಸಂಕಟ.
  3. ಉಗ್ರ ಹೋರಾಟ; ತೀವ್ರಸ್ಪರ್ಧೆ; ಬಲವಾದ ಸಂಘರ್ಷ.
  4. (ಆನಂದ, ನಗು, ಮೊದಲಾದವುಗಳ) ಸ್ಫೋಟನೆ; ವಿಸ್ಫೋಟ; ಬುಗ್ಗೆ: an agony of mirth ನಗೆಯ–ಬುಗ್ಗೆ, ಸ್ಫೋಟನೆ.
  5. ಏಸುವಿನ ಯಾತನೆ; (ಗೆತ್ಸಮನೀ ಉದ್ಯಾನವನದಲ್ಲಿ ಜೀಸಸ್‍ ಅನುಭವಿಸಿದ) ದಾರುಣ ವೇದನೆ; ಯಮಯಾತನೆ.
ಪದಗುಚ್ಛ
  1. death agony = agony(2).
  2. last agony = agony(2).