agonize ಆಗನೈಸ್‍
ಸಕರ್ಮಕ ಕ್ರಿಯಾಪದ

ಚಿತ್ರಹಿಂಸೆ ಮಾಡು; ಪ್ರಾಣಹಿಂಡು; ಜೀವಹಿಂಡು; ಗೋಳುಗುಟ್ಟಿಸು; ದಾರುಣ ಯಾತನೆಗೆ ಯಾ ವೇದನೆಗೆ ಒಳಪಡಿಸು.

ಅಕರ್ಮಕ ಕ್ರಿಯಾಪದ
  1. ಚಿತ್ರಹಿಂಸೆಗೆ ಗುರಿಯಾಗು; ಸಂಕಟಪಡು; ದುಃಖದಿಂದ ಒದ್ದಾಡು; ದಾರುಣ ಯಾತನೆ ಯಾ ವೇದನೆ ಅನುಭವಿಸು.
  2. (ರೂಪಕವಾಗಿ ಸಹ) (ಯಾವುದನ್ನೇ ಮಾಡಲು) ತೀವ್ರವಾಗಿ ಹೋರಾಡು; ಬಲವಾಗಿ ಸ್ಪರ್ಧಿಸು.
  3. (ರೂಪಕವಾಗಿ) ಪರಿಣಾಮಕ್ಕಾಗಿ ಬಹಳ ಪ್ರಯಾಸ ಪಡು ಯಾ ಶ್ರಮವಹಿಸು: agonizing for originality ಸ್ವೋಪಜ್ಞವಾಗಿ ಕಾಣಲು ಪ್ರಯಾಸಪಡುತ್ತ.