agonist ಆಗನಿಸ್ಟ್‍
ನಾಮವಾಚಕ
  1. ಸ್ಪರ್ಧಿ; ಹೋರಾಟಗಾರ; ಕಕ್ಷಿ; ಯಾವುದೇ ಪಂದ್ಯ ಯಾ ಯಾವುದೇ ಬೌದ್ಧಿಕ ಯಾ ಆಧ್ಯಾತ್ಮಿಕ ಸಂಘರ್ಷದಲ್ಲಿ ಭಾಗವಹಿಸುವವನು.
  2. (ಸಾಹಿತ್ಯ ಕೃತಿಯಲ್ಲಿ) ನಾಯಕ; ಮುಖ್ಯಪಾತ್ರ.
  3. (ಶರೀರ ವಿಜ್ಞಾನ) ಸಂಘರ್ಷಕ (ಸ್ನಾಯು); ತಾನು ಸಂಕೋಚನಗೊಳ್ಳುವಾಗ ತನಗೆ ಇದಿರಾಗಿರುವ ಮತ್ತೊಂದು ಸ್ನಾಯು ಅದೇ ಕಾಲದಲ್ಲಿ ಸಂಕೋಚನಗೊಳ್ಳುವುದರಿಂದ ತನ್ನ ಸಂಕೋಚನ ಕ್ರಿಯೆಗೆ ತಡೆ ಹಾಗು ನಿಯಂತ್ರಣವನ್ನು ಅನುಭವಿಸುವ ಸ್ನಾಯು.