agitate ಆಜಿಟೇಟ್‍
ಸಕರ್ಮಕ ಕ್ರಿಯಾಪದ
  1. (ಯಾವುದನ್ನೇ ಜೋರಾಗಿ) ಅಲ್ಲಾಡಿಸು; ಅಲುಗಾಡಿಸು.
  2. (ವ್ಯಕ್ತಿಯನ್ನು, ಮನಸ್ಸನ್ನು, ಭಾವಗಳನ್ನು) ಕಲಕು; ಕದಡು; ಕ್ಷೋಭೆಗೊಳಿಸು; ಅಲ್ಲೋಲ ಕಲ್ಲೋಲ ಮಾಡು; ಕೆರಳಿಸು; ಉದ್ರೇಕಿಸು.
  3. (ವ್ಯಕ್ತಿ, ಮನಸ್ಸು, ಮೊದಲಾದವನ್ನು) ಕಳವಳಗೊಳಿಸು; ಚಿಂತೆಗೀಡುಮಾಡು; ಯೋಚನೆ ಹಿಡಿಸು: was agitated about his health ಅವನ ಆರೋಗ್ಯದ ಬಗ್ಗೆ ಚಿಂತೆಗೀಡಾಗಿದ್ದ.
  4. (ಯೋಜನೆ ಮೊದಲಾದವನ್ನು) ಮೆಲುಕು ಹಾಕು; ಮನಸ್ಸಿನಲ್ಲಿ ಮಥಿಸು; ಮತ್ತೆ ಮತ್ತೆ ಆಲೋಚಿಸು: statesmen agitating new plans ಹೊಸ ಯೋಜನೆಗಳನ್ನು ಆಲೋಚಿಸುತ್ತಿರುವ ರಾಜನೀತಿಜ್ಞರು.
  5. (ಉತ್ಸಾಹದಿಂದ, ಉದ್ರೇಕದಿಂದ) ಚರ್ಚಿಸು; ವಾದಿಸು.
ಅಕರ್ಮಕ ಕ್ರಿಯಾಪದ

(ಯಾವುದರದೇ ಪರವಾಗಿ ಯಾ ವಿರುದ್ಧವಾಗಿ) ಚಳವಳಿ–ನಡೆಸು, ಮಾಡು, ಹೂಡು: agitate for higher wages ಹೆಚ್ಚು ವೇತನಕ್ಕಾಗಿ ಚಳವಳಿ ನಡೆಸು.