aggressive ಅಗ್ರೆಸಿವ್‍
ಗುಣವಾಚಕ
  1. ಮೇಲೆರಗುವ; ಮೇಲೆ ಬೀಳುವ; ಆಕ್ರಮಣದ; ಆಕ್ರಮಣಕಾರಿಯಾದ.
  2. ಆಕ್ರಮಣಶೀಲ; ಆಕ್ರಮಣ ಮನೋಭಾವದ; ಆಕ್ರಮಣ ಪ್ರವೃತ್ತಿಯ: an aggressive nation ಆಕ್ರಮಣಶೀಲ ರಾಷ್ಟ್ರ.
  3. ಮುನ್ನುಗ್ಗುವ; ಕೆಚ್ಚಿನ; ಧೈರ್ಯವಂತ; ಉತ್ಸಾಹಿ; ಹುರುಪಿನಿಂದ ಕೂಡಿದ; ಸಾಹಸವಂತ: an aggressive salesman ಸಾಹಸವಂತ ಮಾರಾಟಗಾರ.
  4. ಆತ್ಮ ಸಮರ್ಥಕ; ತನ್ನದೇ ಸರಿಯೆಂದು ದೃಢವಾಗಿ ವಾದಿಸುವ, ಮುಂದಿಡುವ; ದೃಢವಾದ ಆತ್ಮವಿಶ್ವಾಸವುಳ್ಳ.