aggression ಅಗ್ರೆಷನ್‍
ನಾಮವಾಚಕ
  1. ಅಪ್ರಚೋದಿತ ಆಕ್ರಮಣ; ಪ್ರಚೋದನೆಯಿಲ್ಲದೆ ಯಾ ಕಾರಣವಿಲ್ಲದೆ–ಮೇಲೆ ಬೀಳುವುದು, ಮೇಲೆರಗುವುದು.
  2. ಜಗಳವನ್ನು ಯಾ ಯುದ್ಧವನ್ನು ಪ್ರಾರಂಭಿಸುವುದು.
  3. (ಪ್ರಚೋದನೆಯಿಲ್ಲದೆ ಪ್ರಾರಂಭಿಸಿದ) ಯುದ್ಧ; ಕದನ; ಕಲಹ; ಜಗಳ: ಆಕ್ರಮಣ.
  4. (ಮನಶ್ಶಾಸ್ತ್ರ) ಆಕ್ರಮಣಶೀಲತೆ; ಆಕ್ರಮಣ ಪ್ರವೃತ್ತಿ; ಸ್ವಭಾವಸಿದ್ಧ ಯಾ ಭಗ್ನಮನೋರಥನಾದ್ದರಿಂದ ಉಂಟಾಗುವ ವೈರ, ಆತ್ಮವೈರ, ಹಿಂಸಾಭಾವ, ಸಾಹಸಶೀಲತೆ, ಮೊದಲಾದ ಪ್ರವೃತ್ತಿಗಳು.