aggregation ಆಗ್ರಿಗೇಷನ್‍
ನಾಮವಾಚಕ
  1. (ವ್ಯಕ್ತಿ, ವಸ್ತು, ಮೊದಲಾದವುಗಳ) ಒಕ್ಕೂಟ; ಸಮುದಾಯ; ಸಮೂಹ; ಸಮಷ್ಟಿ; ಸಮುಚ್ಚಯ; ಗುಂಪು; ಸಂಗ್ರಹ.
  2. (ಸಂಘ, ಸಂಸ್ಥೆ, ಮೊದಲಾದವುಗಳಿಗೆ ವ್ಯಕ್ತಿಯನ್ನು) ಸೇರಿಸುವಿಕೆ; ಸದಸ್ಯನನ್ನಾಗಿ ಮಾಡುವಿಕೆ.
  3. ಒಗ್ಗೂಡಿಸಿದ, ಗುಂಪಾದ, ಸಮುದಾಯವಾದ–ಸ್ಥಿತಿ.
  4. (ಯಾವುದೇ ವ್ಯವಸ್ಥೆಯಿಲ್ಲದೆ) ಒಟ್ಟುಗೂಡಿಸುವಿಕೆ; ಗುಂಪುಗೂಡಿಸುವಿಕೆ.
  5. (ಜೀವವಿಜ್ಞಾನ, ಪರಿಸರವಿಜ್ಞಾನ) ಜೀವಿ ಸಮುದಾಯ; ಒಂದು ಸಮಾಜವೆನಿಸುವಷ್ಟು ನಿಕಟ ಸಂಬಂಧ ಹೊಂದಿರದ, ಆದರೆ ಒಟ್ಟಿಗೆ ವಾಸಮಾಡುವ, ಒಂದೇ ಕುಲದ ಯಾ ಬೇರೆಬೇರೆ ಕುಲಗಳ ಜೀವಿಗಳ ಗುಂಪು, ಸಮೂಹ.