1aggregate ಆಗ್ರಿಗ(ಗೇ)ಟ್‍
ನಾಮವಾಚಕ
  1. ಒಟ್ಟು; ಮೊತ್ತ; ಜುಮ್ಲಾ: the aggregate of present knowledge ಈಗಿನ, ಇಂದಿನ-ಜ್ಞಾನದ ಮೊತ್ತ.
  2. (ವ್ಯಕ್ತಿ, ವಸ್ತು, ಮೊದಲಾದವುಗಳ) ಸಮುದಾಯ; ಜಮಾವಣೆ; ಸಮೂಹ; ಪುಂಜ; ಗುಂಪು; ಸಮಷ್ಟಿ; ಸಂಗ್ರಹ; ಸಮುಚ್ಚಯ; ಸಂಕುಲ: an aggregate of discontented individuals ಅತೃಪ್ತರ ಗುಂಪು, ಸಮುದಾಯ.
  3. ಸಿಮೆಂಟುಜಲ್ಲಿ; ಜಲ್ಲಿಗಾರೆಗೆ (ಕಾಂಕ್ರೀಟಿಗೆ) ಉಪಯೋಗಿಸುವ ಮರಳು, ಜಲ್ಲಿಕಲ್ಲು, ಮೊದಲಾದವು.
  4. (ಭೂವಿಜ್ಞಾನ) ಸಮುಚ್ಚಯ ಶಿಲೆ; ವಿವಿಧ ಖನಿಜಗಳು ಒಟ್ಟುಗೂಡಿ ಆದ ಶಿಲೆ.
  5. ಕಣರಾಶಿ; ಗಾತ್ರ ಮತ್ತು ಆಕಾರಗಳಲ್ಲಿ ವ್ಯತ್ಯಾಸವಿರುವ ಮಣ್ಣಿನ ಕಣಗಳ ರಾಶಿ.
ಪದಗುಚ್ಛ

in the aggregate ಒಟ್ಟಿನಲ್ಲಿ ; ಒಟ್ಟಾರೆ; ಎಲ್ಲಾ ಸೇರಿ.

2aggregate ಆಗ್ರಿಗೇಟ್‍
ಸಕರ್ಮಕ ಕ್ರಿಯಾಪದ
  1. ಒಟ್ಟುಗೂಡಿಸು; ಸಮೂಹಿಸು; ಸೇರಿಸು; ಜಮಾಯಿಸು; ಶೇಖರಿಸು; ಸಂಗ್ರಹಿಸು: wealth aggregated by their labour ಅವರ ಶ್ರಮದಿಂದ ಸೇರಿಸಿದ ಐಶ್ವರ್ಯ.
  2. (ಸಂಘಕ್ಕೆ ಯಾ ಸಂಸ್ಥೆಗೆ ವ್ಯಕ್ತಿಯನ್ನು) ಸೇರಿಸು; ಸದಸ್ಯನನ್ನಾಗಿ ಮಾಡು.
  3. (ಆಡುಮಾತು) ಒಟ್ಟು (ಅಷ್ಟು ಯಾ ಅಷ್ಟು ಮೊತ್ತ) ಆಗು; ಒಟ್ಟು ಅಷ್ಟಾಗು: the audience aggregating a million people ಹತ್ತುಲಕ್ಷದಷ್ಟಾಗಿದ್ದ ಶ್ರೋತೃಗಳು.
ಅಕರ್ಮಕ ಕ್ರಿಯಾಪದ

ಒಟ್ಟುಗೂಡು; ಒಟ್ಟಾಗಿ ಸೇರು; ಸಂಗ್ರಹಗೊಳ್ಳು; ಒಟ್ಟಾಗು: people aggregated in predesignated places ಮೊದಲೇ ಗೊತ್ತು ಮಾಡಿದ್ದ ಜಾಗಗಳಲ್ಲಿ ಜನರು ಒಟ್ಟು ಸೇರಿದರು.

3aggregate ಆಗ್ರಿಗ(ಗ್ರೇ)ಟ್‍
ಗುಣವಾಚಕ
  1. ಒಟ್ಟುಗೂಡಿದ; ಒಗ್ಗೂಡಿದ; ಒಟ್ಟಾದ.
  2. ಸಮಷ್ಟಿಯಾದ; ಸಮುದಾಯವಾದ; ಸಮುಚ್ಚಯವಾದ; ಸಮಗ್ರವಾದ: the aggregate sentiments of mankind ಮಾನವಕುಲದ ಸಮಗ್ರ ರಾಗಭಾವಗಳು.
  3. (ಹೂವಿನ ವಿಷಯದಲ್ಲಿ) ಗುಚ್ಛವಾಗಿರುವ; ಕುಚ್ಚಾಗಿರುವ; ಮಂಜರಿಯಾಗಿರುವ; ಒತ್ತಾಗಿ ದಂಡೆಯಾಗಿರುವ ಯಾ ಗೊಂಚಲಾಗಿರುವ.
  4. (ಹಣ್ಣಿನ ವಿಷಯದಲ್ಲಿ) ಗೊಂಚಲಾಗಿರುವ; ಜೊಂಪೆಯಾಗಿರುವ; ಸಮುಚ್ಚಯ; ಸಮಷ್ಟಿ; ಒಂದೇ ಹೂವಿನ ಬೇರೆಬೇರೆಯಾದ ಯಾ ಒಂದುಗೂಡಿದ ಅಂಡಾಶಯಗಳಿಂದಾದ.
  5. (ಶಿಲೆಯ ವಿಷಯದಲ್ಲಿ) ಒಂದು ಯಾ ಹಲವು ಬಗೆಯ ಖನಿಜಗಳಿಂದಾದ; ಸಮುಚ್ಚಿತ; ಸಮುಚ್ಚಯವಾಗಿರುವ.