aggravate ಆಗ್ರವೇಟ್‍
ಸಕರ್ಮಕ ಕ್ರಿಯಾಪದ
  1. (ರೋಗ, ಕಷ್ಟ, ಅಪರಾಧ, ಮೊದಲಾದ ಅಹಿತಕರವಾದುದನ್ನು) ಉಲ್ಬಣಗೊಳಿಸು; ಹೆಚ್ಚಿಸು; ಅಧಿಕಗೊಳಿಸು; ತೀವ್ರಗೊಳಿಸು: war aggravates economic difficulties ಯುದ್ಧವು ಆರ್ಥಿಕ ಸಂಕಷ್ಟಗಳನ್ನು ತೀವ್ರಗೊಳಿಸುತ್ತದೆ.
  2. (ಆಡುಮಾತು) (ವ್ಯಕ್ತಿಯನ್ನು) ಕೆರಳಿಸು; ರೇಗಿಸು; ಉದ್ರೇಕಿಸು; ಕೋಪ ಬರಿಸು: his questions aggravated her ಅವನ ಪ್ರಶ್ನೆಗಳು ಅವಳನ್ನು ರೇಗಿಸಿದವು.
  3. (ಊತ, ಗಾಯ, ಮೊದಲಾದವನ್ನು) ಕೆರಳಿಸು; ಉಲ್ಬಣಗೊಳಿಸು; ವಿಕೋಪಕ್ಕೆ ತರು.