agent ಏಜಂಟ್‍
ನಾಮವಾಚಕ
  1. ಕರ್ತೃ; ಕಾರ್ಯಮಾಡುವ ಯಾ ಪ್ರಭಾವ ಬೀರುವ ಯಾ ಪರಿಣಾಮ ಉಂಟು ಮಾಡುವ ವ್ಯಕ್ತಿ ಯಾ ವಸ್ತು: free agent ಸ್ವತಂತ್ರ ಕರ್ತೃ; ಇನ್ನೊಬ್ಬನಿಗೆ ಅಧೀನನಾಗಿರದೆ ಸ್ವತಂತ್ರನಾಗಿ ಕೆಲಸ ಮಾಡುವವನು.
  2. ಕಾರಕ (ಶಕ್ತಿ); ನಿರ್ದಿಷ್ಟ ಪರಿಣಾಮಗಳನ್ನು ಉಂಟುಮಾಡುವ ಯಾ ಪಡೆಯಲು ಬಳಸುವ ನೈಸರ್ಗಿಕ ಶಕ್ತಿ ಯಾ ವಸ್ತು.
  3. ನಿಮಿತ್ತಕಾರಣ; ಕಾರ್ಯಸಾಧಕ ಕಾರಣ; ಪರಿಣಾಮಕಾರಿ ಸಾಧನ.
  4. ನಿಯೋಗಿ; ಪ್ರತಿನಿಧಿ; ಮುತಾಲಿಕ; ಕಾರುಬಾರಿ; ಕಾರ್ಯಭಾರಿ; ರಾಜಕೀಯ ಮೊದಲಾದವುಗಳಲ್ಲಿ ಇನ್ನೊಬ್ಬರ ಪರ ಯಾ ಇನ್ನೊಬ್ಬರಿಗಾಗಿ ಕೆಲಸಮಾಡುವವನು: political agent ರಾಜಕೀಯ ನಿಯೋಗಿ.
  5. ಬೇಹುಗಾರ; ಗೂಢಚಾರ; ಗುಪ್ತಚಾರ;
  6. ಏಜೆಂಟು; ಬಿಕರಿಗಾರ; ದಳ್ಳಾಳಿ; ಮಧ್ಯಸ್ಥಗಾರ; ವಾಣಿಜ್ಯ ವ್ಯವಹಾರ ಮತ್ತು ಇತರ ಸಂಸ್ಥೆಯ ಪ್ರತಿನಿಧಿ.
  7. (ರಸಾಯನವಿಜ್ಞಾನ) ಕಾರಕ; ಪ್ರತಿಕ್ರಿಯೆ ಉಂಟುಮಾಡುವ ಪದಾರ್ಥ.
ಪದಗುಚ್ಛ
  1. estate agent
    1. ಆಸ್ತಿ ದಳ್ಳಾಳಿ.
    2. ಆಸ್ತಿ ಮೇಲ್ವಿಚಾರಕ; ಆಸ್ತಿಯ ಉಸ್ತುವಾರಿ ನೋಡಿಕೊಳ್ಳುವವನು.
  2. house agent ಮನೆ ದಳ್ಳಾಳಿ.
  3. land agent ಜಮೀನು ದಳ್ಳಾಳಿ.
  4. law agent (ಸ್ಕಾಟ್ಲಂಡ್‍) ಲಾರ್ಡ್‍ ಅಡ್ವೊಕೇಟ್‍ ಪದವಿಯ ವಕೀಲನಿಗಿಂತ ಕೆಳ ಅಂತಸ್ತಿನ ವಕೀಲ.