agency ಏಜನ್ಸಿ
ನಾಮವಾಚಕ
  1. ಕರ್ತೃತ್ವ; ಕಾರ್ಯನಡೆಸುವಿಕೆ: I don’t question his free agency ಅವನ ಕರ್ತೃತ್ವಸ್ವಾತಂತ್ರವನ್ನು ನಾನು ಪ್ರಶ್ನಿಸುವುದಿಲ್ಲ.
  2. ಕಾರಕ; ಸಾಧನ; ಮಾಧ್ಯಮ; ಮಧ್ಯಸ್ತಿಕೆ; ಮಧ್ಯವರ್ತಿತನ: fertilized by the agency of insects ಕೀಟಗಳ ಮಧ್ಯವರ್ತಿಕೆಯಿಂದ ಫಲವಂತಗೊಳಿಸಿದ.
  3. ಕರ್ತೃ ಯಾ ಕಾರಣ ಯಾ ಸಾಧನ; ಮೂರ್ತೀಕರಿಸಿದ ಕರ್ತೃತ್ವ ಯಾ ಕಾರಣತ್ವ ಯಾ ಸಾಧನತೆ: an invisible agency ಅಗೋಚರ ಕರ್ತೃ ಯಾ ಕಾರಣ.
  4. ಏಜೆನ್ಸಿ; ದಳ್ಳಾಳಿ; ನಿಯೋಗ; ತರಫಿ; ದಳ್ಳಾಳಿ ಯಾ ಪ್ರತಿನಿಧಿಯ ಕೆಲಸ: through a friend’s agency ಸ್ನೇಹಿತನೊಬ್ಬನ ತರಫಿನಿಂದ.
  5. ಏಜೆನ್ಸಿ; ದಳ್ಳಾಳಿ ಸಂಸ್ಥೆ; ಸೇವಾಸಂಸ್ಥೆ; ನಿಯೋಗಿಯ ಕಾರ್ಯಾಲಯ; ಕಾರ್ಯಶಾಲೆ; ಸಾಮಾನ್ಯವಾಗಿ ದೂರದಲ್ಲಿರುವ ಬೇರೊಬ್ಬರ ಪರವಾಗಿ ಕಾರ್ಯ ನಿರ್ವಹಿಸುವ ಸಂಸ್ಥೆ: an advertising agency ಜಾಹೀರಾತು ಸಂಸ್ಥೆ. news agency ವಾರ್ತಾಸಂಸ್ಥೆ.
  6. ವಿಶ್ವಸಂಸ್ಥೆಯ ಯಾ ಸರ್ಕಾರದ ವಿಶೇಷ ವಿಭಾಗ, ಇಲಾಖೆ.