agar ಏಗಾರ್‍
ನಾಮವಾಚಕ

ಏಗಾರ್‍; ಅಗರ್‍:

  1. ಅನೇಕ ಬಗೆಯ (ಮುಖ್ಯವಾಗಿ ಸಿಲೋನಿನ) ಸಮುದ್ರ ಕಳೆ, ಸಮುದ್ರಪಾಚಿ.
  2. ಕೆಲವು ಸಂವರ್ಧಕ ಮಾಧ್ಯಮಗಳನ್ನು ಘನೀಕರಿಸುವುದು, ಐಸ್‍ಕ್ರೀಂ ಮೊದಲಾದ ಆಹಾರ ವಸ್ತುಗಳನ್ನು ಗಟ್ಟಿಯಾಗಿಸುವುದು, ಮೊದಲಾದವುಗಳಲ್ಲಿ ಬಳಸುವ ಜಿಲೆಟಿನ್‍ಗೆ ಬದಲಾಗಿ ಉಪಯೋಗಿಸಬಹುದಾದ, ಕೆಲವು ವಿಧದ ಸಮುದ್ರಪಾಚಿಗಳಿಂದ ತಯಾರಿಸಿದ ಜಿಲೆಟಿನ್‍ನಂಥ ಲೋಳೆ ದ್ರವ್ಯ.
  3. ಅಗರನ್ನು ಘನೀಕರಿಸುವ ಯಾವುದೇ ಸಂವರ್ಧಕ ಮಾಧ್ಯಮ.