again ಅಗೆ()ನ್‍
ಕ್ರಿಯಾವಿಶೇಷಣ
  1. ಹಿಂದಕ್ಕೆ; ಮೊದಲಿದ್ದ ಯಾ ಪೂರ್ವದ ಸ್ಥಿತಿಗೆ ಯಾ ಸ್ಥಳಕ್ಕೆ: turn again ಹಿಂದಿನ ಸ್ಥಳಕ್ಕೆ ಹೋಗು; ವಾಪಸು ಹೋಗು; ಹಿಂದಿರುಗು. you will be well again ನೀನು ಹಿಂದಿನ (ಆರೋಗ್ಯ) ಸ್ಥಿತಿಗೆ ಬರಿತ್ತೀಯೆ.
  2. ಮತ್ತೊಮ್ಮೆ; ಮತ್ತೆ; ಇನ್ನೊಮ್ಮೆ; ಮರಳಿ; ತಿರುಗಿ; ಪುನಃ.
  3. ಅಷ್ಟೇ ಅಲ್ಲದೆ; ಅದೂ ಅಲ್ಲದೆ; ಜೊತೆಗೆ; ಇನ್ನೂ: the poem is short, again it is sweet ಕವನ ಚಿಕ್ಕದು, ಅಷ್ಟೇ ಅಲ್ಲ ಮಧುರ ಕೂಡ.
  4. ಉತ್ತರವಾಗಿ; ಪ್ರತಿಯಾಗಿ: answer again ಪ್ರತಿಯಾಗಿ ಉತ್ತರಿಸು.
  5. ಇಲ್ಲವೆ; ಅಥವಾ; ಯಾ: it might happen and again it might not ಅದು ಆಗಬಹುದು, ಇಲ್ಲವೆ ಆಗದಿರಬಹುದು.
  6. ಅನುಗುಣವಾಗಿ; ಅನುಸಾರವಾಗಿ.
ಪದಗುಚ್ಛ
  1. again and again ಮತ್ತೆ ಮತ್ತೆ.
  2. back again, home again, quite well again ಪುನಃ ಸ್ವಸ್ಥಿತಿಗೆ; ಮೊದಲಿನ ಸ್ವಾಸ್ಥ್ಯಕ್ಕೆ; ಹಿಂದಿನ ಆರೋಗ್ಯದಲ್ಲಿ.
  3. ever and again ಪದೇ ಪದೇ; ಹೆಜ್ಜೆ ಹೆಜ್ಜೆಗೂ.
  4. now and again ಆಗಾಗ್ಗೆ.
  5. time and (time) again ಪುನಃ ಪುನಃ.
ನುಡಿಗಟ್ಟು
  1. as much again ಇಮ್ಮಡಿಯಾಗಿ; ಎರಡುಪಟ್ಟು; ಎರಡರಷ್ಟು.
  2. be oneself again (ದೈಹಿಕವಾಗಿ ಯಾ ಮಾನಸಿಕವಾಗಿ) ಮುಂಚಿನ, ಮೊದಲಿನ ಯಾ ಪೂರ್ವದ-ಸ್ಥಿತಿಗೆ ಬರು, ಆ ಸ್ಥಿತಿ ಪಡೆ.
  3. come again
    1. (ಮುಖ್ಯವಾಗಿ) ಇನ್ನೊಮ್ಮೆ ಯತ್ನಿಸು.
    2. (ಆಡುಮಾತು) ಏನು ಹೇಳಿದೆ? ಇನ್ನೊಮ್ಮೆ ಹೇಳು.
  4. half as many again (ಸಂಖ್ಯೆಯಲ್ಲಿ) ಒಂದೂವರೆಯಷ್ಟು.
  5. half as much again (ಪರಿಮಾಣದಲ್ಲಿ) ಒಂದೂವರೆಯಷ್ಟು.