afterpain ಆಹ್ಟರ್‍ಪೇನ್‍
ನಾಮವಾಚಕ
  1. (ವೈದ್ಯಶಾಸ್ತ್ರ) ಮರುನೋವು; ಅನುಯಾತನೆ; ನಿರ್ದಿಷ್ಟ ಸಮಯ ಕಳೆದ ಬಳಿಕ ಉಂಟಾಗುವ ನೋವು: the afterpain of a tooth extraction ಹಲ್ಲು ಕಿತ್ತ ಮೇಲೆ (ಸ್ವಲ್ಪ ಸಮಯದ ನಂತರ) ಕಾಣಿಸಿಕೊಳ್ಳುವ ನೋವು.
  2. (ಬಹುವಚನದಲ್ಲಿ) ಬಾಣಂತಿ ನೋವು; ಪ್ರಸವಾನಂತರದ ಬೇನೆ; ಹೆರಿಗೆಯಾದ ಮೇಲೆ ಗರ್ಭಕೋಶವು ಗರ್ಭಪೂರ್ವಸ್ಥಿತಿಯನ್ನು ಹೊಂದಲು ಸಂಕುಚಿತಗೊಳ್ಳುವಾಗ ಆಗುವ ನೋವು.