afterglow ಆಹ್ಟರ್‍ಗ್ಲೋ
ನಾಮವಾಚಕ
  1. ಬೈಗುಬೆಳಕು; ಸಂಜೆ ಹೊಳಪು; ಹಿಂಬೆಳಕು; ಸಂಧ್ಯಾರಾಗ; ಸಾಯಂ ಪ್ರಭೆ; ಪ್ರದೋಷ ಪ್ರಭೆ; ಸೂರ್ಯ ಮುಳುಗಿದ ಮೇಲೆ, ಮುಖ್ಯವಾಗಿ ಪಶ್ಚಿಮ ಬಾನಿನಲ್ಲಿ, ಕಾಣಬರುವ ಪ್ರಕಾಶ.
  2. (ಬೆಂಕಿ ಕಡ್ಡಿಯ ಉರಿ ಆರಿದ ಮೇಲೋ, ವಿರಳೀಕೃತ ಅನಿಲದಲ್ಲಿ ವಿದ್ಯುತ್‍ ವಿಸರ್ಜನೆ ಆದ ಮೇಲೋ ಉಳಿಯುವ) ಹೊಳಪು; ಅನುಪ್ರಭೆ; ಉತ್ತರ ದೀಪ್ತಿ.
  3. (ರೂಪಕವಾಗಿ) (ವೈಭವ, ವಿಜಯ, ಯಶಸ್ಸು, ಮೊದಲಾದವುಗಳ) ಸವಿನೆನಪು; ಮಧುರಸ್ಮೃತಿ; ಸಂಸ್ಮರಣೆ.