after-care ಆಹ್ಟರ್‍ಕೇರ್‍
ನಾಮವಾಚಕ
  1. (ವೈದ್ಯಶಾಸ್ತ್ರ) ರೋಗೋತ್ತರ ಆರೈಕೆ; ರೋಗ, ಮಗುವಿನ ಜನನ, ಶಸ್ತ್ರಚಿಕಿತ್ಸೆ ಮೊದಲಾದವುಗಳ ನಂತರ ಮಾಡುವ–ಆರೈಕೆ, ಉಪಚಾರ.
  2. ಅನುರಕ್ಷಣೆ; ಉತ್ತರ ಯೋಗಕ್ಷೇಮ; ಶಿಕ್ಷೆ ಮುಗಿದ ಮೇಲೆ ಅಪರಾಧಿಗಳನ್ನು ತಿದ್ದುವ ಏರ್ಪಾಟು. after-care association ಅನುರಕ್ಷಣ ಸಂಘ.