See also 2affront
1affront ಅಹ್ರಂಟ್‍
ಸಕರ್ಮಕ ಕ್ರಿಯಾಪದ
  1. (ಎದುರೆದುರಿಗೆ ಯಾ ಬಹಿರಂಗವಾಗಿ) ಮುಖಭಂಗಮಾಡು; ಅಪಮಾನಗೊಳಿಸು; ಮಾನ ಕಳೆ; ಮರ್ಯಾದೆ ತೆಗೆ; ತೇಜೋವಧೆಗೊಳಿಸು.
  2. (ಗೌರವ ತೋರಿಸದೆ) ಆತ್ಮಗೌರವಕ್ಕೆ ಕುಂದುಂಟು ಮಾಡು; ಮನ ನೋಯಿಸು.
  3. (ಮುಖಾಮುಖಿಯಾಗಿ) ಎದುರಿಸು; ಪ್ರತಿಭಟಿಸು; ಎದುರುಬೀಳು; ವಿರುದ್ಧವಾಗಿ ನಿಲ್ಲು.
See also 1affront
2affront ಅಹ್ರಂಟ್‍
ನಾಮವಾಚಕ
  1. ಪ್ರತ್ಯಕ್ಷ ಅಪಮಾನ; ಮುಖಭಂಗ; ತೇಜೋಭಂಗ; ತೇಜೋವಧೆ: I felt it an affront ಯಾ I took it as an affront ಅದನ್ನು ನಾನು ಪ್ರತ್ಯಕ್ಷ ಅಪಮಾನವೆಂದು ಭಾವಿಸಿದೆ. he offered an affront to his own parents ಅವನು ತನ್ನ ತಂದೆ ತಾಯಿಯರಿಗೇ ಪ್ರತ್ಯಕ್ಷವಾಗಿ ಅಪಮಾನ ಮಾಡಿದ.
  2. ಅಗೌರವ; ಅವಮರ್ಯಾದೆ; ಪ್ರತಿಷ್ಠೆಗೆ ಯಾ ಆತ್ಮಗೌರವಕ್ಕೆ ಕುಂದು.