affirmation ಆಹರ್ಮೇಷನ್‍
ನಾಮವಾಚಕ
  1. (ಮುಖ್ಯವಾಗಿ ನ್ಯಾಯಶಾಸ್ತ್ರ) ದೃಢೀಕರಣ; ಸ್ಥಿರೀಕರಣ.
  2. (ನ್ಯಾಯಶಾಸ್ತ್ರ) (ಮುಖ್ಯವಾಗಿ ಪ್ರಮಾಣ ಮಾಡುವುದು ಅಂತಸ್ಸಾಕ್ಷಿಗೆ ವಿರೋಧವೆಂಬುವವನ) ಸತ್ಯವಾಕ್ಯ; ಸತ್ಯವಾದ ಹೇಳಿಕೆ; ಸತ್ಯವಚನ.
  3. (ತರ್ಕಶಾಸ್ತ್ರ) ಅಸ್ತ್ಯರ್ಥಕ ವಾಕ್ಯ; ಅಸ್ತಿವಾಚಕ ವಾಕ್ಯ; ಅನ್ವಯಾರ್ಥಕ ವಾಕ್ಯ.
  4. (ಮುಖ್ಯವಾಗಿ ಅಸ್ತ್ಯರ್ಥದಲ್ಲಿ) ನಿಜವೆಂದು, ಸತ್ಯವೆಂದು–ಹೇಳುವುದು.
  5. ದೃಢವಾದ ನಿಶ್ಚಯವಾದ–ಹೇಳಿಕೆ.