affinity ಅಹಿನಿಟಿ
ನಾಮವಾಚಕ
  1. ಮದುವೆ ನಂಟು; ವಿವಾಹಸಂಬಂಧ; ನೆಂಟಸ್ತಿಕೆ; ನೆಂಟಸ್ತನ.
  2. ವಿವಾಹ ಸಂಬಂಧಿಗಳು; ಮದುವೆಯಿಂದಾದ ಬಳಗ, ನೆಂಟರು.
  3. (ಭಾಷೆ, ಪ್ರಾಣ, ಸಸ್ಯಗಳಲ್ಲಿರುವ) ರೂಪದ ಹೋಲಿಕೆ; ರಚನಾಸಾದೃಶ್ಯ.
  4. (ರೂಪಕವಾಗಿ) (ಸಂಬಂಧವನ್ನು, ಕುಟುಂಬದ ಹೋಲಿಕೆಯನ್ನು ಸೂಚಿಸುವ) ರೂಪಸಾಮ್ಯ ಯಾ ಗುಣಸಾದೃಶ್ಯ; ಕುಟುಂಬದ ಹೋಲಿಕೆ; ಮನೆ(ತನದ) ಹೋಲಿಕೆ. ಉ೫ (ಮನುಷ್ಯ, ಪ್ರಾಣಿ, ವಸ್ತುಗಳಲ್ಲಿರುವ ಸ್ವಾಭಾವಿಕ) ಒಲವು; ಆಕರ್ಷಣೆ; ಮೈತ್ರಿ.
  5. ಆಕರ್ಷಣೀಯ, ಆಕರ್ಷಕ–ವ್ಯಕ್ತಿ, ವಸ್ತು.
  6. (ರಸಾಯನವಿಜ್ಞಾನ) ಮೈತ್ರಿ; ಆಕರ್ಷಣ ಬಲ; ನಿರ್ದಿಷ್ಟ ದ್ರವ್ಯ, ಕಣ, ಯಾ ಧಾತುವಿನೊಡನೆ ಸಂಯೋಗವಾಗಲು ಯಾವುದೇ ದ್ರವ್ಯ, ಕಣ ಯಾ ಧಾತುವಿಗಿರಬಹುದಾದ ಪ್ರವೃತ್ತಿ.