1affiliate ಅಹಿಲಿಏಟ್‍
ಸಕರ್ಮಕ ಕ್ರಿಯಾಪದ
  1. (ಸಂಸ್ಥೆಯ ವಿಷಯದಲ್ಲಿ) (ವ್ಯಕ್ತಿಗಳನ್ನು ಸದಸ್ಯರನ್ನಾಗಿ, ಸಂಘಗಳನ್ನು ಶಾಖೆ ಯಾ ಅಂಗಗಳನ್ನಾಗಿ) ಸ್ವೀಕರಿಸು; ಸೇರಿಸಿಕೊ; ತೆಗೆದುಕೊ.
  2. (ವ್ಯಕ್ತಿಗಳನ್ನು, ಸಂಘಗಳನ್ನು ಸಂಸ್ಥೆ ಮೊದಲಾದವಕ್ಕೆ) ಸೇರಿಸು.
  3. (ವ್ಯಕ್ತಿಗಳನ್ನು, ಸಂಘಗಳನ್ನು ಬೇರೊಂದು ಸಂಸ್ಥೆಯೊಡನೆ) ಸಂಯೋಜಿಸು; ಸಂಬಂಧ ಕಲ್ಪಿಸು.
  4. (ನ್ಯಾಯಶಾಸ್ತ್ರ) ಪಿತೃತ್ವ–ಹೊರಿಸು, ಆರೋಪಿಸು; ವ್ಯಭಿಚಾರದಿಂದ ಹುಟ್ಟಿದ ಮಗುವಿನ ರಕ್ಷಣೆ ಪೋಷಣೆಗಳಿಗಾಗಿ ಯಾರು ಅದರ ತಂದೆಯೆಂದು ಪ್ರತೀತಿಯಿದೆಯೋ ಯಾ ಊಹಿಸಲಾಗಿದೆಯೋ ಅವನನ್ನು ಅದರ ತಂದೆಯೆಂದು ನಿರ್ಧರಿಸು.
  5. ಮೂಲವನ್ನು, ಉಗಮವನ್ನು–ಗೊತ್ತುಮಾಡು, ಕಂಡುಹಿಡಿ, ಪತ್ತೆಹಚ್ಚು, ನಿರ್ಣಯಿಸು: affiliate Shakespeare’s Hamlet to earlier plays ಶೇಕ್‍ಸ್ಪಿಯರನ ಹ್ಯಾಮ್‍ಲೆಟ್‍ ನಾಟಕದ ಮೂಲವನ್ನು ಅದರ ಹಿಂದಿನ ನಾಟಕಗಳಲ್ಲಿ ಕಾಣು.
ಅಕರ್ಮಕ ಕ್ರಿಯಾಪದ

ನಿಕಟವಾಗಿ–ಸಂಬಂಧಿಸಿರು, ಸಂಬಂಧ ಪಡೆದಿರು.

2affiliate ಅಹಿಲಿಏಟ್‍
ನಾಮವಾಚಕ
  1. ಅಂಗಸಂಸ್ಥೆ; ದೊಡ್ಡಸಂಸ್ಥೆಯ ಅಂಗ ಯಾ ಶಾಖೆ.
  2. ಸದಸ್ಯ; ಯಾವುದೇ ಸಂಸ್ಥೆಗೆ ಸೇರಿದ ವ್ಯಕ್ತಿ.
3affiliate ಅಹಿಲಿಏಟ್‍
ಗುಣವಾಚಕ