affection ಅಹೆಕ್‍ಷನ್‍
ನಾಮವಾಚಕ
  1. ಮನಮುಟ್ಟುವಿಕೆ; ಮನಸ್ಸಿನ ಮೇಲೆ ಪರಿಣಾಮ, ಪ್ರಭಾವ–ಬೀರುವಿಕೆ; ಮನಸ್ಸಿನಲ್ಲಿ ಸಂತೋಷ, ದುಃಖ, ಕನಿಕರ, ಆಶ್ಚರ್ಯ, ವಿಸ್ಮಯ, ಕೋಪತಾಪ, ಮೊದಲಾದವನ್ನುಂಟುಮಾಡುವಿಕೆ.
  2. ಪರಿಣಾಮಕ್ಕೆ ಒಳಗಾಗುವಿಕೆ; ಪ್ರಭಾವಿತನಾಗುವಿಕೆ.
  3. ಭಾವ; ಮನಃಸ್ಥಿತಿ.
  4. ಒಲವು; ಮನೋಭಾವ; ಮನಃಪ್ರವೃತ್ತಿ; ಚಿತ್ತವೃತ್ತಿ.
  5. ಸ್ನೇಹ; ವಿಶ್ವಾಸ; ಸೌಹಾರ್ದ; ಅಕ್ಕರೆ; ಪ್ರೀತಿ; ಪ್ರೇಮ; ವಾತ್ಸಲ್ಯ; ಮಮತೆ (ಮೊದಲಾದವು).
  6. (ಯಾವುದೇ ಪರಿಣಾಮದಿಂದ ಉಂಟಾದ) ದೇಹ ಸ್ಥಿತಿ; ಶರೀರ ಸ್ಥಿತಿ.
  7. (ಮುಖ್ಯವಾಗಿ ದೈಹಿಕ ಯಾ ಮಾನಸಿಕ) ಬೇನೆ; ಜಾಡ್ಯ; ರೋಗ; ವ್ಯಾಧಿ.
  8. (ಮನಶ್ಶಾಸ್ತ್ರ) ಭಾವ; ಅನುಭವದಲ್ಲಿ ಜ್ಞಾನದ ಮತ್ತು ಸಂವೇದನೆಯ ಅಂಶಗಳಿಗೆ ಭಿನ್ನವಾದ ಸುಖ, ದುಃಖ, ಮೊದಲಾದ ಭಾವಗಳ ಅಂಶ.