See also 2affect  3affect
1affect ಅಹೆಕ್ಟ್‍
ಸಕರ್ಮಕ ಕ್ರಿಯಾಪದ
  1. (ಅಸಹಜವಾದ, ಕೃತಕವಾದ ನಡೆನುಡಿ, ಪ್ರಾಚೀನವಾದ ಪ್ರಯೋಗ ಶೈಲಿ, ಮೊದಲಾದವನ್ನು) ಆಡಂಬರದಿಂದ ಯಾ ಠೀವಿಯಿಂದ ಬಳಸು; ಅನುಸರಿಸು: Spenser himself affects the obsolete ಸ್ಪೆನ್ಸರ್‍ನಂಥ ಕವಿಯೇ ಗತಪ್ರಯೋಗಗಳನ್ನು (ಠೀವಿಯಿಂದ) ಬಳಸುತ್ತಾನೆ.
  2. (ವಸ್ತುಗಳ ವಿಷಯದಲ್ಲಿ) (ಯಾವುದೇ ರೂಪ, ಆಕಾರ, ಮೊದಲಾದವನ್ನು) ತಾಳು; ತಳೆ: it affects now one shape and now another ಅದು ಈಗೊಂದು ಆಕಾರ ಆಗೊಂದು ಆಕಾರವನ್ನು ತಾಳುತ್ತದೆ.
  3. (ಯಾವುದೇ ಪಾತ್ರದ) ವೇಷ–ಹಾಕು, ತಾಳು; ಸೋಗು ಹಾಕು; (ಯಾವುದೇ ಪಾತ್ರದಂತೆ) ನಟಿಸು: affect a free thinker ಸ್ವತಂತ್ರ ಚಿಂತಕನ ವೇಷ ಹಾಕು.
  4. (ಸಂತೋಷ, ದುಃಖ, ಸ್ನೇಹ, ಪ್ರೀತಿ, ಅನಾದರ, ಕೋಪತಾಪ, ಮೊದಲಾದವನ್ನು) ನಟಿಸು; ಪ್ರದರ್ಶಿಸು; (ಹೊರ) ತೋರಿಸು: affect anger ಕೋಪ ನಟಿಸು.
  5. (ಯಾವುದೇ ಕಾರ್ಯದಲ್ಲಿ ನಿರತನಾಗಿರುವಂತೆ, ಮಗ್ನನಾಗಿರುವಂತೆ) ನಟಿಸು: he affected being extremely busy ಅವನು ಬಹಳ ಕೆಲಸದಲ್ಲಿ ಮುಳುಗಿರುವಂತೆ ನಟಿಸಿದನು.
  6. (ಯಾವುದನ್ನೇ ಅದರ ಮೇಲಣ ಷೋಕಿ, ಮೋಹ, ರುಚಿ, ಮೊದಲಾದ ಕಾರಣಗಳಿಂದ) ಬಳಸು: unlike the present day youths, this young man affects sober costume ಇಂದಿನ ಯುವಕರಂತಲ್ಲದೆ ಈ ತರುಣನು ಗಂಭೀರವಾದ ಉಡುಪನ್ನು ಬಳಸುತ್ತಾನೆ, ಹಾಕುತ್ತಾನೆ.
  7. (ಪ್ರಾಚೀನ ಪ್ರಯೋಗ) ಬಯಸು; ಆಸೆಪಡು; ಇಷ್ಟಪಡು; ಮೆಚ್ಚು: he affected blue colour ಅವನು ನೀಲಿ ಬಣ್ಣವನ್ನು ಇಷ್ಟಪಟ್ಟನು.
  8. (ಸಸ್ಯಗಳ ವಿಷಯದಲ್ಲಿ) (ಯಾವುದೇ ಪ್ರದೇಶದಲ್ಲಿ ಸಮೃದ್ಧಿಯಾಗಿ) ಇರು; ಬೆಳೆ.
  9. (ಪ್ರಾಣಿಗಳ ವಿಷಯದಲ್ಲಿ) (ಯಾವುದೇ ಪ್ರದೇಶದಲ್ಲಿ) ನೆಲಸು; ವಾಸಿಸು; ಜೀವಿಸು: zebras affect Africa ಜೀಬ್ರಾಗಳು ಆಹ್ರಿಕಾದಲ್ಲಿ ವಾಸಿಸುತ್ತವೆ.
See also 1affect  3affect
2affect ಅಹೆಕ್ಟ್‍
ಸಕರ್ಮಕ ಕ್ರಿಯಾಪದ
  1. (ರೋಗದ ವಿಷಯದಲ್ಲಿ) ತಗುಲು; ಹತ್ತು; ಸೋಂಕು; ತಾಕು: cholera affected the whole village ಇಡೀ ಹಳ್ಳಿಗೇ ಕಾಲರ ತಗುಲಿತು.
  2. ಮನಸ್ಸನ್ನು–ಕಲಕು, ಕರಗಿಸು: the story affected her ಕಥೆ ಅವಳ ಮನಸ್ಸನ್ನು ಕಲಕಿತು.
  3. (ಯಾವುದೇ ಪರಿಣಾಮವನ್ನು) ಉಂಟು ಮಾಡು: the music affected me ಸಂಗೀತವು ನನ್ನ ಮೇಲೆ ಆಹ್ಲಾದಕರ ಪರಿಣಾಮವನ್ನುಂಟುಮಾಡಿತು. the cold affects the body ಶೀತ ದೇಹಕ್ಕೆ ಬಾಧೆ ಉಂಟು ಮಾಡುತ್ತದೆ.
See also 1affect  2affect
3affect ಆಹೆಕ್ಟ್‍
ನಾಮವಾಚಕ

(ಮನಶ್ಶಾಸ್ತ್ರ) ಪ್ರೇರಕಭಾವ; (ಮುಖ್ಯವಾಗಿ ಯಾವುದೇ ಕಾರ್ಯಕ್ಕೆ ಪ್ರೇರಿಸುವ) ಪ್ರವೃತ್ತಿ; ಸಂಕಲ್ಪ; ಇಚ್ಛೆ; ಭಾವ.