affair ಅಹೇರ್‍
ನಾಮವಾಚಕ
  1. (ಮಾಡಬೇಕಾದ) ಕೆಲಸ; (ಒದಗಿಬಂದಿರುವ) ಕಜ್ಜ; ಕಾರ್ಯ: it is a laborious affair ಅದೊಂದು ಪ್ರಯಾಸದ ಕೆಲಸ.
  2. (ಸಂಬಂಧಪಟ್ಟ) ವಿಚಾರ; ವಿಷಯ; ಪ್ರಸಂಗ; ಪ್ರಕರಣ; ಸಂಗತಿ: that is my affair ಅದು ನನಗೆ ಸಂಬಂಧಿಸಿದ ವಿಷಯ.
  3. (ಆಡುಮಾತು) ವಸ್ತು; ಪದಾರ್ಥ; ಖಚಿತವಾಗಿ ವರ್ಣಿಸದ ಯಾವುದೇ ವಸ್ತು, ಕ್ರಿಯೆ, ಮೊದಲಾದವು: this machine is a complicated affair ಈ ಯಂತ್ರ ಒಂದು ಜಟಿಲವಾದ ವಸ್ತು.
  4. (ಆಡುಮಾತು) ಘಟನೆ; ಪ್ರಸಂಗ; ಪ್ರಕರಣ: the railway accident was a terrible affair ಆ ರೈಲ್ವೆ ಅಪಘಾತ ಒಂದು ಭಯಂಕರ ಘಟನೆ. what a shameful affair! ಎಂಥ ನಾಚಿಕೆಗೇಡು ಪ್ರಸಂಗ!
  5. ಪ್ರಣಯ ಸಂಗತಿ; ಪ್ರಣಯ ಪ್ರಸಂಗ.
  6. (ಬಹುವಚನ) ಜೀವನದ ದೈನಂದಿನ ವ್ಯವಹಾರಗಳು; ಬದುಕಿನ ಸಾಮಾನ್ಯ ಕೆಲಸಕಾರ್ಯಗಳು: domestic affairs ಗೃಹಕೃತ್ಯದ ವ್ಯವಹಾರಗಳು.
  7. (ಬಹುವಚನ) ವಾಣಿಜ್ಯ ವ್ಯವಹಾರಗಳು.
  8. (ಬಹುವಚನ) ಸಾರ್ವಜನಿಕ ವಿಷಯಗಳು; ರಾಜ್ಯಕ್ಕೆ, ಸಮಾಜಕ್ಕೆ, ಸಾರ್ವಜನಿಕರಿಗೆ ಸಂಬಂಧಿಸಿದ–ವಿಷಯಗಳು, ವಿಚಾರಗಳು, ಸಂಗತಿಗಳು: current affairs ಸದ್ಯದ ಸಂಗತಿಗಳು. world affairs ಪ್ರಪಂಚದ ವಿಚಾರಗಳು.
ನುಡಿಗಟ್ಟು

affair of honour (ಮಾನವನ್ನು ಉಳಿಸಿಕೊಳ್ಳಲು ಹೂಡುವ) ದ್ವಂದ್ವ ಕಾಳಗ.