aestheticism ಈ(ಎ)ಸ್ತೆಟಿಸಿಸಮ್‍
ನಾಮವಾಚಕ
  1. ಸೌಂದರ್ಯವಾದ; ಸೌಂದರ್ಯಾದ್ವೈತ; ಚೆಲುವೇ ಎಲ್ಲವೂ ಎಂಬ ವಾದ; ಸೌಂದರ್ಯತತ್ತ್ವವೇ ಮೊದಲನೆಯದು, ನೀತಿ ಮೊದಲಾದ ತತ್ತ್ವಗಳೆಲ್ಲಾ ಸೌಂದರ್ಯತತ್ತ್ವದಿಂದ ಬಂದವು ಎನ್ನುವ ಸಿದ್ಧಾಂತ.
  2. ಕಲಾ ಸ್ವಾತಂತ್ರ್ಯವಾದ; ಕಲೆಯು ರಾಜಕೀಯ, ಧರ್ಮ, ನೀತಿ, ಮೊದಲಾದವುಗಳಿಗೆ ಅಧೀನವಲ್ಲ ಎಂಬ ವಾದ.
  3. ಕಲಾವ್ಯಸನ; ಲಲಿತಕಲೆಗಳನ್ನು ಕುರಿತ ಅತಿಶಯ ವ್ಯಾಮೋಹ.