aerosol ಏರಸಾಲ್‍
ನಾಮವಾಚಕ

(ರಸಾಯನವಿಜ್ಞಾನ)

  1. ವಾಯುಕಲಿಲ; ಗಾಳಿ ಯಾ ಅನಿಲದಲ್ಲಿ ಹರಡಿರುವ ಹೊಗೆ, ಮಂಜು, ಮೊದಲಾದ ಅತ್ಯಂತ ಸೂಕ್ಷ್ಮವಾದ ಘನ ಯಾ ದ್ರವಕಲಿಲ ಕಣಗಳು.
  2. ಏರೊಸಾಲ್‍:
    1. ವಾಯುದ್ರವ; ಸೀಸೆ, ಟ್ಯೂಬು, ಮೊದಲಾದವುಗಳಲ್ಲಿ ಒತ್ತಿ ತುಂಬಿ, ತುಂತುರುತುಂತುರಾಗಿ ಹೊರಬಿಡಲು ಏರ್ಪಾಟು ಮಾಡಿರುವ ಕ್ರಿಮಿನಾಶಕ ಸುಗಂಧದ್ರವ್ಯ ಮೊದಲಾದ ದ್ರವ.
    2. ವಾಯುದ್ರವ ಪದಾರ್ಥವನ್ನು ತುಂಬಿರುವ ಸೀಸೆ ಮೊದಲಾದವು.