See also 2aerial
1aerial ಏರಿಅಲ್‍
ಗುಣವಾಚಕ
  1. ಗಾಳಿಯ; ವಾಯುವಿನ; ಅನಿಲದ; ವಾಯವೀಯ.
  2. ಗಾಳಿಯಂತೆ–ಸೂಕ್ಷ್ಮವಾದ, ಹಗುರವಾದ.
  3. ಗಾಳಿಯಂತಿರುವ; ಅಶರೀರ; ಕಾಲ್ಪನಿಕ; ಭಾವನಾಮಾತ್ರದ: aerial architecture ಗಾಳಿ ಮಹಲು; ಕಾಲ್ಪನಿಕ ಭವನ.
  4. ವಾಯುಮಂಡಲದ; ವಾತಾವರಣದ; ವಾಯುಮಂಡಲದಲ್ಲಿರುವ.
  5. ಆಕಾಶದಲ್ಲಿರುವ; ಅಂತರಿಕ್ಷದಲ್ಲಿರುವ; ಅಂತರಿಕ್ಷದಲ್ಲಿ–ಇರುವ, ಚಲಿಸುವ ಯಾ ಸಂಭವಿಸುವ: aerial railway ಏರಿಯಲ್‍ ರೈಲು; ತೂಗು ರೈಲು; ಬಾನರೈಲು ರಸ್ತೆ; ಆಕಾಶದ ರೈಲುಹಾದಿ; ರೈಲುಗಾಡಿಗಳನ್ನು ನೆಲದಿಂದ ಮೇಲೆ ಎತ್ತರದಲ್ಲಿ ತೂಗಾಡುವ ಹಳಿಗಳ ಮೂಲಕ ಸಾಗಿಸುವ ವ್ಯವಸ್ಥೆ ಯಾ ಏರ್ಪಾಟು: aerial ropeway ತೂಗುಹಾದಿ; ಬಾನ ಹಗ್ಗದ ಹಾದಿ; ಆಕಾಶ ರಜ್ಜುಪಥ; ಪೆಟ್ಟಿಗೆ ಮೊದಲಾದವುಗಳನ್ನು ಸಾಗಿಸಲು ಎತ್ತರದಲ್ಲಿ ತೂಗುಹಾಕಿದ ತಂತಿ ಹೊರಜಿಗಳಿಂದ ಮಾಡಿದ ಏರ್ಪಾಟು.
  6. ವಿಮಾನದ ಯಾ ವಿಮಾನಕ್ಕೆ ಸಂಬಂಧಿಸಿದ ಯಾ ವಿಮಾನದಿಂದ ಮಾಡಿದ: aerial navigation ವಿಮಾನಯಾನ; ವಾಯುಯಾನ. aerial bombardment ವಿಮಾನ(ದಿಂದ ಮಾಡಿದ) ಬಾಂಬುದಾಳಿ. aerial photography ವಿಮಾನ ಛಾಯಾಗ್ರಹಣ; ವಿಮಾನದಿಂದ ಹೋಟೋಗಳನ್ನು ತೆಗೆಯುವುದು.
  7. (ಸಸ್ಯವಿಜ್ಞಾನ) (ನೆಲದಲ್ಲೋ, ನೀರಿನಲ್ಲೋ ಆಗಿರದೆ) ಗಾಳಿಯಲ್ಲಿ ಬೆಳೆದ.
See also 1aerial
2aerial ಏರಿಅಲ್‍
ನಾಮವಾಚಕ

ಏರಿಯಲ್‍; ವಿದ್ಯುತ್‍ ಗ್ರಾಹಕ; ವಿಸರಣ ತಂತಿ ಯಾ ದಂಡ; ರೇಡಿಯೋ ಅಲೆಗಳ ಪ್ರಸಾರಕ್ಕೂ ಸ್ವೀಕಾರಕ್ಕೂ ಉಪಯೋಗಿಸುವ ಲೋಹದ ತಂತಿ, ದಂಡ, ಮೊದಲಾದವು.