aerate ಏರೇಟ್‍
ಸಕರ್ಮಕ ಕ್ರಿಯಾಪದ
  1. ಗಾಳಿಗೊಡ್ಡು; ಗಾಳಿಯ ಯಾಂತ್ರಿಕ ಯಾ ರಾಸಾಯನಿಕ ಕ್ರಿಯೆಗೆ ಒಳಪಡಿಸು.
  2. ಅನಿಲ ಕುಡಿಸು; ಅನಿಲಗೂಡಿಸು; ಗಾಳಿ ಕುಡಿಸು; ಗಾಳಿ ಉಣಿಸು; ಗಾಳಿಯನ್ನು ಯಾ ಯಾವುದೇ ಅನಿಲವನ್ನು (ಮುಖ್ಯವಾಗಿ ಕಾರ್ಬನ್‍ ಡೈಆಕ್ಸೈಡನ್ನು) ತುಂಬು.
  3. (ಶುದ್ಧವಾದ) ಗಾಳಿ ಹರಿಸು; ಗಾಳಿಗೊಡ್ಡು: a well aerated room ಚೆನ್ನಾಗಿ ಗಾಳಿಯಾಡುವ, ಗಾಳಿ ಬೀಸುವ ಕೊಠಡಿ.
  4. (ಉಸಿರಾಟದಿಂದ ಆಗುವಂತೆ) ರಕ್ತಕ್ಕೆ ಆಮ್ಲಜನಕ-ಒದಗಿಸು, ದೊರಕಿಸು, ನೀಡು, ತುಂಬು.