aeon ಈಅ(ಆ)ನ್‍
ನಾಮವಾಚಕ
  1. ಅಮೇಯ ಕಾಲ; ಅಳತೆಗೆ ಮೀರಿದ ಕಾಲ; ಗಣನಾತೀತ ಕಾಲ.
  2. ಅನಂತಕಾಲ.
  3. (ಭೂವಿಜ್ಞಾನ) ಮಹಾಕಲ್ಪ; ಮಹಾಯುಗ; ಭೂಮಿಯ ಆಯುರ್ಮಾನದಲ್ಲಿ ಒಂದು ದೀರ್ಘಾವಧಿ.
  4. (ಪ್ಲೇಟೋವಿನ ಮತ್ತು ಗ್ನಾಸ್ಟಿಕ್‍ ಪಂಥದ ದಾರ್ಶನಿಕರ ಚಿಂತನೆಯಲ್ಲಿ) ಅನಾದಿಶಕ್ತಿ (ವಿಶೇಷ ಬ್ರಹ್ಮಾಂಡದ ಸೃಷ್ಟಿಸ್ಥಿತಿಗಳಲ್ಲಿ ಭಾಗವಹಿಸುವ ಭಗವಂತನ ಒಂದು ಶಕ್ತಿವಿಶೇಷ ಯಾ ಅವಸ್ಥೆ).