aeolipyle ಇಓಲಿಪೈಲ್‍
ನಾಮವಾಚಕ

ಉಗಿ ಬುಗರಿ; ಹಬೆಬುಗರಿ; ಗೋಳಾಕಾರದ ಪಾತ್ರೆಯೊಳಗಿಂದ ಅದರ ಎರಡು ಬದಿಯಲ್ಲಿರುವ ಚಿಕ್ಕರಂಧ್ರಗಳ ಮೂಲಕ ಹೊರಹೊರಡುವ ಹಬೆಯು ಗೋಳಕ್ಕೆ ಸ್ಪರ್ಶವಾಗಿ, ಆದರೆ ಪರಸ್ಪರ ವಿರುದ್ಧ ದಿಕ್ಕುಗಳಲ್ಲಿ ಚಿಮ್ಮುವ ಪರಿಣಾಮವಾಗಿ, ಒಟ್ಟು ಗೋಳವೇ ಸುತ್ತುವಂತೆ ಏರ್ಪಡಿಸಿರುವ ಯಂತ್ರ; ಆಧುನಿಕ ಜೆಟ್‍ ಚಾಲನ ತತ್ತ್ವದ ಪ್ರಾಕೃತ ರೂಪ (ಕ್ರಿಸ್ತಪೂರ್ವ ೨ನೇ ಶತಮಾನದಲ್ಲಿ ಹೀರೋ ನಿರ್ಮಿಸಿದ ಯಂತ್ರ). Figure: aeolipyle1